Bangalore, ಮಾರ್ಚ್ 12 -- Karnataka Police: ವಾಹನಗಳ ಮೇಲೆ ಆಯಾ ಇಲಾಖೆಯ ಫಲಕ ಇಲ್ಲವೇ ಹೆಸರನ್ನು ಹಾಕಿಸಿಕೊಳ್ಳಲು ಸಾರಿಗೆ ನಿಯಮದಲ್ಲಿ ಅವಕಾಶವಿದೆ. ಕೆಲ ಸಂಘಟನೆಗಳವರೂ ದೊಡ್ಡದಾಗಿ ಫಲಕ ಹಾಕಿಸಿಕೊಳ್ಳಲು ಅವಕಾಶವಿಲ್ಲ. ಸಾರಿಗೆ ಇಲಾಖೆ ಹಲವು ಬಾರಿ ಕರ್ನಾಟಕದಲ್ಲಿಯೇ ಇಂತಹವರನ್ನು ಪತ್ತೆ ಹಚ್ಚಿ ದಂಡವನ್ನು ವಿಧಿಸಿದೆ. ಅದೇ ರೀತಿ ವಿವಿಧ ವೃತ್ತಿಯಲ್ಲಿರುವವರೂ ಸ್ವಂತ ವಾಹನದ ಮೇಲೆ ಅದನ್ನು ದೊಡ್ಡದಾಗಿ ಹಾಕಿಸಿಕೊಂಡು ಹೋಗುವುದೂ ಉಂಟು. ಇದರಲ್ಲಿ ಪೊಲೀಸರು, ಮಾಧ್ಯಮದವರು, ವೈದ್ಯರು, ವಕೀಲರ ಸಹಿತ ವಿವಿಧ ವೃತ್ತಿಯವರು ಹೆಸರು ಹಾಕಿಸಿಕೊಳ್ಳುತ್ತಾರೆ. ಪೊಲೀಸರು ಈ ರೀತಿ ಸ್ವಂತ ವಾಹನಗಳಿಗೆ ವೃತ್ತಿಯ ಹೆಸರು ಹಾಕಿಸಿಕೊಳ್ಳುವುದಕ್ಕೂ ಕರ್ನಾಟಕ ಗೃಹ ಇಲಾಖೆಯು ಮಿತಿಯನ್ನು ಹೇರಿದೆ. ಯಾರೇ ಪೊಲೀಸ್‌ ಸಿಬ್ಬಂದಿ, ಅಧಿಕಾರಿ ಹಾಗೂ ಪೊಲೀಸ್‌ ಇಲಾಖೆ ಕಚೇರಿಗಳಲ್ಲಿ ಕೆಲಸ ಮಾಡುವವರು, ಅವರ ಕುಟುಂಬದವರು ಯಾರೂ ಪೊಲೀಸ್‌ ಎಂದು ಸ್ವಂತ ವಾಹನದ ಮೇಲೆ ಬರೆಸಬಾರದು ಎನ್ನುವ ಸೂಚನೆಯನ್ನು ನೀಡಲಾಗಿದೆ.

ಬೆಂಗಳೂರಿನಲ್ಲಿ ನಡೆದಿರುವ ವಿಧಾನಮ...