Bangalore, ಏಪ್ರಿಲ್ 2 -- Karnataka Party Politics: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಹೊಸ ಪಕ್ಷ ಹುಟ್ಟು ಹಾಕಲಿದ್ದಾರೆಯೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ. ರಾಜ್ಯ ಪ್ರವಾಸ ಕೈಗೊಂಡಿರುವ ಯತ್ನಾಳ ಅವರೂ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದು, ವಿಜಯದಶಮಿ ವೇಳೆಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. 60 ವರ್ಷ ಯತ್ನಾಳ್ ಹೊಸ ಪಕ್ಷ ರಚಿಸಿದರೆ ಬಿಜೆಪಿಯಿಂದ ಹೊರ ಹೋಗಿ ಹೊಸ ಪಕ್ಷ ಹುಟ್ಟು ಹಾಕಿದ ಮುಖಂಡರ ಪಟ್ಟಿಗೆ ಇವರ ಹೆಸರೂ ಸೇರ್ಪಡೆಯಾಗಲಿದೆ. ವಿಶೇಷ ಎಂದರೆ ಯಾರ ವಿರುದ್ಧ ಯತ್ನಾಳ ಹೋರಾಟ ಆರಂಭಿಸಿದ್ದಾರೋ ಅವರೂ ಕರ್ನಾಟಕ ಜನತಾ ಪಕ್ಷ ಕೆಜೆಪಿ ಹುಟ್ಟು ಹಾಕಿ ಮರಳಿ ಮಾತೃ ಪಕ್ಷಕ್ಕೆ ಮರಳಿದ್ದರು. ಅವರೇ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ.

ಬಿಜೆಪಿ ಮುಖಂಡರಾದ ಶ್ರೀರಾಮುಲು ಬಡವರ ಶ್ರಮಿಕರ ರೈತರ ಕಾಂಗ್ರೆಸ್ ( ಬಿಎಸ್ಆರ್ ಕಾಂಗ್ರೆಸ್), ಬಳ್ಳಾರಿಯವರೇ ಆದ ಗಾಲಿ ಜನಾರ್ಧನ ರೆಡ್ಡಿ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ( ಕೆಆರ್‌ಪಿಪಿ), ಉದ್ಯಮಿ ವಿಜಯಸಂಕೇಶ್ವ...