Bangalore, ಫೆಬ್ರವರಿ 17 -- Karnataka Next Cm: ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುತ್ತಾರೆ. ಹಾಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಚರ್ಚೆ ಹೊಸದಲ್ಲ. ಸುಮಾರು ಆರು ತಿಂಗಳಿನಿಂದಲೂ ಕರ್ನಾಟಕ ಕಾಂಗ್ರೆಸ್‌ ಅಂಗಳದಲ್ಲಿ ಮಾತ್ರವಲ್ಲ ಇತರೆ ಪಕ್ಷಗಳ ಪಡಸಾಲೆಯಲ್ಲೂ ಚರ್ಚೆಯಲ್ಲಿದೆ. ದೆಹಲಿಯ ಕಾಂಗ್ರೆಸ್‌ ವಲಯದಲ್ಲೂ ಇದು ದೊಡ್ಡ ತಲೆನೋವನ್ನೇ ತಂದಿದೆ. ಹಿಂದೆ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಗಢ, ಅಸ್ಸಾಂ ಸಹಿತ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಅನುಭವಿಸಿರುವ ಕಹಿ ಪಾಠದ ಕಾರಣದಿಂದಲೂ ಕರ್ನಾಟಕದಲ್ಲಿ ಏನಾಗಬಹುದು ಎನ್ನುವ ಆತಂಕವಂತೂ ಹೈಕಮಾಂಡ್‌ ವಲಯದಲ್ಲಿದೆ. ಹಾಗಾದರೇ ಮುಂದಿನ ಆರೇಳು ತಿಂಗಳಲ್ಲಿ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡುತ್ತಾರಾ, ಡಿಕೆಶಿವಕುಮಾರ್‌ ಅವರಿಗೆ ಈ ಹುದ್ದೆ ಒಲಿಯಲಿದೆಯಾ, ಮೂರನೆಯವರು ಸಿಎಂ ಆಗಬಹುದಾ ಅಥವಾ ಸಿದ್ದರಾಮಯ್ಯ ಅವರೇ ಮುಂದುವರೆಯಬಹುದಾ...