Bangalore, ಏಪ್ರಿಲ್ 10 -- Karnataka New DGP:ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿರುವ ಡಾ.ಅಲೋಕ್‌ಮೋಹನ್ ಅವರು ಈ ವರ್ಷದ ಏಪ್ರಿಲ್ ಅಂತ್ಯಕ್ಕೆ ಸೇವೆಯಿಂದ ನಿವೃತ್ತರಾಗಲಿದ್ದು. ಕರ್ನಾಟಕದ ಪೊಲೀಸ್ ಮುಖ್ಯಸ್ಥರ ಹುದ್ದೆ ಖಾಲಿಯಾಗಲಿದೆ. ಈ ಹುದ್ದೆಗೆ ಹೊಸ ಪೊಲೀಸ್ ಮಹಾನಿರ್ದೇಶಕರನ್ನು ನೇಮಿಸಬೇಕಾಗಿದ್ದು, ಏಪ್ರಿಲ್ ಮೂರನೇ ಇಲ್ಲವೇ ನಾಲ್ಕನೇ ವಾರದಂದು ಹೆಸರು ಅಂತಿಮವಾಗಬಹುದು. ಇಬ್ಬರ ಹೆಸರು ಆ ಹುದ್ದೆಗೆ ಚಾಲ್ತಿಯಲ್ಲಿದೆ. ಸದ್ಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕರಾಗಿರುವ ಪ್ರಶಾಂತ್‌ಕುಮಾರ್ ಠಾಕೂರ್ ಸೇವಾ ಹಿರಿತನ ಹೊಂದಿದ್ದು ಅವರನ್ನು ಆಯ್ಕೆ ಮಾಡಬಹುದು. ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಅಧಿಕಾರಿಯೊಬ್ಬರು ಡಿಜಿಪಿಯಾಗಿ , ಅದು ಕನ್ನಡಿಗರೊಬ್ಬರು ಮಹಾನಿರ್ದೇಶಕರಾಗಿ ನೇಮಕಗೊಂಡಿಲ್ಲ. ಇದರಿಂದ ಸದ್ಯ ಸಿಐಡಿ ಡಿಜಿಪಿಯಾಗಿರುವ ಡಾ.ಎಂ.ಎ. ಸಲೀಂ ಅವರನ್ನು ಡಿಜಿಪಿಯಾಗಿ ನೇಮಕ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.
Published by HT Digital Content Services with permission from HT Kanna...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.