Bangalore, ಏಪ್ರಿಲ್ 10 -- Karnataka New DGP:ಕರ್ನಾಟಕದ ಪೊಲೀಸ್‌ ಮಹಾನಿರ್ದೇಶಕರಾಗಿರುವ ಡಾ.ಅಲೋಕ್‌ಮೋಹನ್‌ ಅವರು ಈ ವರ್ಷದ ಏಪ್ರಿಲ್‌ ಅಂತ್ಯಕ್ಕೆ ಸೇವೆಯಿಂದ ನಿವೃತ್ತರಾಗಲಿದ್ದು. ಕರ್ನಾಟಕದ ಪೊಲೀಸ್‌ ಮುಖ್ಯಸ್ಥರ ಹುದ್ದೆ ಖಾಲಿಯಾಗಲಿದೆ. ಈ ಹುದ್ದೆಗೆ ಹೊಸ ಪೊಲೀಸ್‌ ಮಹಾನಿರ್ದೇಶಕರನ್ನು ನೇಮಿಸಬೇಕಾಗಿದ್ದು, ಏಪ್ರಿಲ್‌ ಮೂರನೇ ಇಲ್ಲವೇ ನಾಲ್ಕನೇ ವಾರದಂದು ಹೆಸರು ಅಂತಿಮವಾಗಬಹುದು. ಇಬ್ಬರ ಹೆಸರು ಆ ಹುದ್ದೆಗೆ ಚಾಲ್ತಿಯಲ್ಲಿದೆ. ಸದ್ಯ ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಮಹಾನಿರ್ದೇಶಕರಾಗಿರುವ ಪ್ರಶಾಂತ್‌ಕುಮಾರ್‌ ಠಾಕೂರ್‌ ಸೇವಾ ಹಿರಿತನ ಹೊಂದಿದ್ದು ಅವರನ್ನು ಆಯ್ಕೆ ಮಾಡಬಹುದು. ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಅಧಿಕಾರಿಯೊಬ್ಬರು ಡಿಜಿಪಿಯಾಗಿ , ಅದು ಕನ್ನಡಿಗರೊಬ್ಬರು ಮಹಾನಿರ್ದೇಶಕರಾಗಿ ನೇಮಕಗೊಂಡಿಲ್ಲ. ಇದರಿಂದ ಸದ್ಯ ಸಿಐಡಿ ಡಿಜಿಪಿಯಾಗಿರುವ ಡಾ.ಎಂ.ಎ. ಸಲೀಂ ಅವರನ್ನು ಡಿಜಿಪಿಯಾಗಿ ನೇಮಕ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

ಕರ್ನಾಟಕದ ಪೊಲೀಸ್‌ ಪಡೆಯ ಮುಖ್ಯಸ್ಥರನ್ನು ಹಿರಿತನದ ಆಧಾರದ ಮೇಲೆಯೇ ನೇಮಕ ಮಾಡಿಕೊಂಡ...