Bangalore, ಏಪ್ರಿಲ್ 28 -- Karnataka Nature Guide:ಅಪರಿಚಿತ ಹಾದಿಗಳನ್ನು ಅನ್ವೇಷಿಸಲು ಬಯಸುವಿರಾ? ಕರ್ನಾಟಕದ ಬೆಟ್ಟಗಳು, ಕಾಡುಗಳು ಮತ್ತು ಹುಲ್ಲುಗಾವಲುಗಳ ಪಕ್ಷಿಗಳು, ಸಸ್ಯಗಳು, ಶಿಲೀಂಧ್ರಗಳು, ಸಸ್ತನಿಗಳು ಮತ್ತು ಚಿಟ್ಟೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ? ನಿಮಗೆ ಚಾರಣ್ಯದಲ್ಲಿ ಆಸಕ್ತಿಯಿದೆಯೇ, ಈಗಾಗಲೇ ಚಾರಣ ಮಾಡಿದ ಅನುಭವವೂ ನಿಮಗಿದೆಯೇ, ಕರ್ನಾಟಕ ಅರಣ್ಯ ಇಲಾಖೆಯು ಅಧಿಕೃತ ಚಾರಣಕ್ಕಾಗಿ ನೇಚರ್‌ಗೈಡ್‌ಗಳನ್ನು ನೇಮಿಸಲು ಮುಂದಾಗಿದೆ. ಈಗಾಗಲೇ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯಿಂದಲೇ ತರಬೇತಿಯನ್ನು ನಡೆಸಿ ನೇಚರ್‌ಗೈಡ್‌ಗಳನ್ನು ನೇಮಕ ಮಾಡಲಾಗಿದೆ. ಆಸಕ್ತಿ ಇರುವವರು ಆಯಾ ಪ್ರದೇಶಗಳಲ್ಲಿಯೇ ಇರುವ ಪರಿಸರ ಪ್ರವಾಸೋದ್ಯಮ ಚಟುವಟಿಕೆಯ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಹಂತ ಹಂತವಾಗಿ ಇದು ಜಾರಿಗೆ ಬರಲಿದೆ.

ಕರ್ನಾಟಕದಲ್ಲಿ ಪರಿಸರ ಪ್ರವಾಸೋದ್ಯಮ ವಿಪುಲವಾಗಿ ಬೆಳೆದಿದೆ. ಮಲೆನಾಡು, ಹಳೆ ಮೈಸೂರು, ಪಶ್ಚಿಮಘಟ್ಟ ಸಾಲಿನ ಜಿಲ್ಲೆಗಳು, ಬೆಂಗಳೂರು ಭಾಗದ...