Mysuru, ಫೆಬ್ರವರಿ 6 -- Karnataka Kumbhamela 2025: ಉತ್ತರ ಭಾರತದಲ್ಲಿ ಕೋಟ್ಯಂತರ ಭಕ್ತರ ಪುಣ್ಯಸ್ನಾನಕ್ಕೆ ಮಹಾ ಕುಂಭಮೇಳ ಸಾಕ್ಷಿಯಾಗುತ್ತಿದೆ. ಅದೇ ರೀತಿ ದಕ್ಷಿಣ ಭಾರತದ ಪ್ರಯಾಗ ಎಂದೇ ಹೆಸರು ಪಡೆದಿರುವ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದ ಕಾವೇರಿ- ಕಬಿನಿ ಹಾಗೂ ಗುಪ್ತಗಾಮಿನಿಯಾಗಿರುವ ಸ್ಪಟಿಕ ಸರೋವರಗಳು ಸಂಧಿಸುವ ಸಂಗಮ ತಾಣದಲ್ಲಿ ಕುಂಭಮೇಳ ನಡೆಯುತ್ತಿದೆ. ಕರ್ನಾಟಕದ ಕುಂಭಮೇಳ ಎಂದೇ ಜನಪ್ರಿಯವಾಗಿರುವ ತಿ.ನರಸೀಪುರ ಕುಂಭಮೇಳ 2025ಕ್ಕೆ ದಿನಗಣನೆ ಶುರುವಾಗಿದ್ದು, ತಯಾರಿಗಳು ಜೋರಾಗಿಯೇ ನಡೆದಿವೆ. ಮೈಸೂರು ಜಿಲ್ಲೆ ತಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 10ರಿಂದ ಮೂರು ದಿನಗಳ ಕಾಲ ನಡೆಯಲಿರುವ 12ನೇ ಕುಂಭಮೇಳಕ್ಕೆ ಮೈಸೂರು ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಾಗೂ ಜಿಲ್ಲಾಪಂಚಾಯಿತಿ ಇಲಾಖೆಯಿಂದ ಭಕ್ತರಿಗಾಗಿ ಭಾರೀ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
Published by HT Digital Content Services with permission from HT Kannada....
Click here to read full article from source
To read the full article or to get the complete feed from this publication, please
Contact Us.