T narsipur, ಫೆಬ್ರವರಿ 12 -- ಮೈಸೂರು: ಉತ್ತರ ಭಾರತದಲ್ಲಿ ಕೋಟ್ಯಂತರ ಭಕ್ತರ ಪಾಲ್ಗೊಳ್ಳುವಿಕೆ ನಡುವೆ ಮಹಾ ಕುಂಭಮೇಳ ನಡೆಯುತ್ತಿರುವ ನಡುವೆಯೇ ದಕ್ಷಿಣ ಭಾರತದಲ್ಲೂ ಮೂರು ದಿನಗಳ ಕುಂಭಮೇಳ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಕಳೆಗಟ್ಟಿದೆ. ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಜತೆಯಲ್ಲಿ ಕಾವೇರಿ ಆರತಿಯ ವೈಭವದಲ್ಲಿ ಭಾಗಿಯಾದರು. ಮಂಗಳವಾರ ರಾತ್ರಿ ತ್ರಿವೇಣಿ ಸಂಗಮ ವಿಭಿನ್ನ ಬೆಳಕಿನ ಲೋಕವನ್ನೇ ಸೃಷ್ಟಿಸಿತು. ಮೊದಲ ದಿನ ಕುಂಭಮೇಳದ ಆರಂಭ, ಪುಣ್ಯಸ್ನಾನ ನಡೆದರೆ, ಎರಡನೇ ದಿನದಂದು ಕಾವೇರಿ- ಕಪಿಲಾ ನದಿ ಹಾಗೂ ಸ್ಪಟಿಕ ಸರೋವರ ಗುಪ್ತಗಾಮಿನಿ ತ್ರಿವೇಣಿ ಸಂಗಮದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆದವು.

ದಕ್ಷಿಣ ಪ್ರಯಾಗ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಹರಿದು ಬಂದಿದ್ದ ಭಕ್ತ ಸಾಗರವು ಮಂಗಳವಾರ ರಾತ್ರಿ 'ಕಾವೇರಿ ಆರತಿ'ಯ ಬೆಳಗನ್ನು ಕಣ್ತುಂಬಿಕೊಂಡಿತು. ಕುಂಭಮೇಳದ ಎರಡನೇ ದಿನವಾದ ಮಂಗಳವಾರ, ಅಗಸ್ತ್ಯೇಶ್ವರ ಸ್ವಾಮಿ ದೇಗುಲದ ಸ್ನಾನಘಟ್ಟದಲ್ಲ...