Daskshina kannada, ಮಾರ್ಚ್ 31 -- Karnataka Hotel Industry: ರಾಜ್ಯ ಸರಕಾರ ಹಾಲು, ಮೊಸರಿನ ದರವನ್ನು ಏಪ್ರಿಲ್ 1ರಿಂದ ಲೀಟರ್ ಗೆ 4 ರೂ ಏರಿಸಲು ಕೆಎಂಎಫ್ ಗ್ರೀನ್ ಸಿಗ್ನಲ್ ನೀಡಿದ ಪರಿಣಾಮ, ಹೋಟೆಲ್ ಉದ್ಯಮಕ್ಕೆ ಸಂಕಷ್ಟ ಬಂದೊದಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನ, ಬೀಚ್ ಸಹಿತ ಹಲವು ಕಡೆಗಳಿಗೆ ಜನರು ಆಗಮಿಸುತ್ತಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಹೋಟೆಲ್ ಗಳು ಬೇರೆ ಬೇರೆ ರೀತಿಯಲ್ಲಿ ಬ್ಯುಸಿನೆಸ್ ಮಾಡುತ್ತಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಇಷ್ಟು ಹೋಟೆಲ್ ಗಳು ಇದ್ದರೆ, ಅವುಗಳಲ್ಲಿ ಸಂಖ್ಯೆಯ ಏಳು ಪಟ್ಟು ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಕರಾವಳಿಯ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಣ್ಣ ಹೋಟೆಲ್, ದೊಡ್ಡ ಹೋಟೆಲ್, ಕ್ಯಾಂಟೀನ್ ಗಳಲ್ಲಿ ಹೆಚ್ಚಿನವು ಈಗ ಭಾನುವಾರವೂ ತೆರೆದಿರುತ್ತದೆ. ಇಲ್ಲಿ ಕಾಫಿ, ಚಹಾ, ಉಪಾಹಾರ, ಊಟಕ್ಕೆ ಹಾಲು ಬೇಕೇ ಬೇಕು. ಹಾಲಿನ ಉತ್ಪನ್ನಗಳು ಅಗತ್ಯವೂ ಹೌದು. ಹಾಲಿಲ್ಲದೆ ಹೋಟೆಲ್ ಗಳು ಕೆಲಸ ಮಾಡುವುದು ಕಷ್ಟ. ಲೀಟರ್ ಗ...