Bangalore, ಮಾರ್ಚ್ 26 -- Karnataka Food: ರಾಗಿ ಮುದ್ದೆ ಎಂದರೆ ಅದು ಕರ್ನಾಟಕದ ಆಹಾರದ ಸಂಸ್ಕೃತಿಯ ಭಾಗ. ದಕ್ಷಿಣ ಕರ್ನಾಟಕ ಮಾತ್ರವಲ್ಲದೇ ಕರ್ನಾಟಕದ ಹಲವು ಭಾಗದಲ್ಲೂ ಮುದ್ದೆ ಊಟದ ಸವಿ ಬಲ್ಲವನೇ ಬಲ್ಲ.ಮುದ್ದೆಯನ್ನು ಬಗೆಬಗೆಯಾಗಿ ನಮ್ಮಲ್ಲಿ ತಯಾರಿಸುವುದುಂಟು. ರಾಗಿ ಮುದ್ದೆ ದಕ್ಷಿಣ ಭಾರತ ಭಾಗದಲ್ಲಿ ಜನಪ್ರಿಯವಾದರೆ, ಇತರೆಡೆ ಜೋಳದ ಮುದ್ದೆಯೂ ಹೆಚ್ಚು ಬಳಕೆಯಲ್ಲಿದೆ. ರಾಗಿ ಮುದ್ದೆಯೊಂದಿಗೆ ಸೊಪ್ಪಿನ ಸಾರು, ಮುದ್ದೆಗೆ ಅಕ್ಕಿನುಚ್ಚು ಬಳಸುವುದು ಅಲ್ಲಲ್ಲಿ ಬಳಕೆಯಲ್ಲಿದೆ. ಇಂತಹ ಊಟದ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಹಾಕಿರುವ ಪೋಸ್ಟ್‌ ಒಂದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಯಾವಾಗಲೂ ರಾಜಕೀಯಸಂಸ್ಕೃತಿ ಬಗ್ಗೆಯೇ ಮಾತನಾಡುವುದಕ್ಕಿಂತ ಒಂದಿಷ್ಟು ಆಹಾರಸಂಸ್ಕೃತಿ ಬಗ್ಗೆ ಮಾತನಾಡಿದರೆ ಯಾರಿಗಾದರೂ ನಷ್ಟ ಆಗುತ್ತದೆಯೇ? ಇಲ್ಲವಲ್ಲ. ಹಾಗಾಗಿ, ರಾಗಿಮುದ್ದೆ ತಿನ್ನುವವರಿಗೆ ಹೀಗೊಂದು ಪ್ರಶ್ನೆ ರವಿಕೃಷ್ಣಾ ರೆಡ್ಡಿ ಅವರದ್ದು.

ನಿಮ್ಮ ಮನೆಯಲ್ಲಿ ರಾಗಿಮುದ್ದೆ ಮಾಡು...