Bangalore, ಮಾರ್ಚ್ 30 -- Karnataka Eid Ul Fitr: ಕರ್ನಾಟಕದಾದ್ಯಂತ 2025ನೇ ಸಾಲಿನ ಈದ್ ಉಲ್ ಫಿತ್ರ್ ಅನ್ನು ಮಾರ್ಚ್‌31ರ ಸೋಮವಾರವೇ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಭಾನುವಾರ ಸಂಜೆಯೇ ಕರ್ನಾಟಕದೆಲ್ಲೆಡೆ ಚಂದ್ರ ದರ್ಶನ ಆಗಿದ್ದರಿಂದ ಈದ್ ಉಲ್ ಫಿತ್ರ್ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಮೌಲಾನಾ ಮಕ್ಸೂದ್ ಇಮ್ರಾನ್ ಮಾಹಿತಿ ನೀಡಿದ್ದಾರೆ. ಸೋಮವಾರ ಬೆಳಿಗ್ಗೆಯೇ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳ ಜತೆಗೆ ಮುಸ್ಲೀಂ ಸಮುದಾಯದವರು ಇರುವ ಪ್ರದೇಶಗಳಲ್ಲಿ ರಂಜಾನ್‌ ಹಬ್ಬ ಆಚರಣೆ ಆಗಲಿದೆ. ವಿಶೇಷ ಪ್ರಾರ್ಥನೆಗಳು ಇರಲಿವೆ. ಪ್ರತಿಯೊಬ್ಬರೂ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ರಂಜಾನ್‌ ಅನ್ನು ಸಡಗರದಿಂದ ಆಚರಿಸುವರು. ಈ ಬಾರಿ ಚಂದ್ರದರ್ಶನ ವಿಳಂಬವಾಗಿದ್ದರೆ ಹಬ್ಬವು ಒಂದು ದಿನ ಮುಂದಕ್ಕೆ ಹೋಗುವ ಸಾಧ್ಯತೆಯಿತ್ತು.ಭಾನುವಾರದಂದು ಬೆಂಗೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ಅಮೀರ್ ಎ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ಆಯೋಜಿಸ...