Bangalore, ಮಾರ್ಚ್ 19 -- Karnataka Bundh: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರ ಪುಂಡಾಟ, ಎಂಇಎಸ್‌ ಹಾಗೂ ಶಿವಸೇನೆ ಕಾರ್ಯಕರ್ತರ ದಬ್ಬಾಳಿಕೆ, ಗಡಿ ವಿಚಾರದಲ್ಲಿ ಸರ್ಕಾರದ ನಿಲುವುಗಳನ್ನು ಖಂಡಿಸಿ ಮಾರ್ಚ್ 22ರ ಶನಿವಾರದಂದು ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಹದಿನೈದು ದಿನದ ಹಿಂದೆಯೇ ಬೆಳಗಾವಿಯಲ್ಲಿ ಹಿಂಸಾಚಾರ ನಡೆದಾಗಲೇ ಬಂದ್‌ ಘೋಷಣೆ ಮಾಡಲಾಗಿತ್ತು. ಆದರೆ ಎಸ್‌ಎಸ್‌ಎಲ್‌ಸಿ ಸಹಿತ ವಿವಿಧ ಪರೀಕ್ಷೆಗಳು ಇರುವ ಜತೆಗೆ ಈಗಾಗಲೇ ಬೆಳಗಾವಿ ಭಾಗದಲ್ಲಿ ಶಾಂತಿ ನೆಲೆಸಿರುವುದರಿಂದ ಬಂದ್‌ ನಡೆಸುವ ಕುರಿತು ಅಂತಿಮ ನಿರ್ಧಾರ ಪ್ರಕಟವಾಗಿರಲಿಲ್ಲ. ಈಗ ಮಾರ್ಚ್‌ 22ರಂದೇ ಬಂದ್‌ ನಡೆಸುವ ಕುರಿತು ತೀರ್ಮಾನವನ್ನೂ ಪ್ರಕಟಿಸಲಾಗಿದೆ. ಶನಿವಾರ ಮೂರನೇ ಶನಿವಾರದ ರಜೆಯೂ ಇರುವುದರಿಂದ ಬಂದ್‌ ಪರಿಣಾಮ ಅಷ್ಟಾಗಿ ಆಗದೇ ಇದ್ದರೂ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುವುದು ಖಚಿತವಾಗಿದೆ. ಬಂದ್‌ ಹಿನ್ನೆಲೆಯಲ್ಲಿ ಬಸ್‌ ಸೇವೆ ಸೇರಿದಂತೆ ಯಾವ್ಯಾವ ಸೇವೆಗಳ ಮೇಲೆ ವ್ಯತ್ಯಯವಾಗಲಿದೆ ಎನ್ನುವುದು ಶುಕ್ರವಾರದ ಹೊತ್ತಿಗ...