ಭಾರತ, ಮಾರ್ಚ್ 7 -- ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 16ನೇ ಬಜೆಟ್‌ ಇದು. ಕರ್ನಾಟಕದಲ್ಲಿ ಇಷ್ಟು ಸಂಖ್ಯೆಯ ಬಜೆಟ್‌ ಇದುವರೆಗೂ ಯಾರೂ ಮಂಡಿಸಿಲ್ಲ. ಇನ್ನು ದೇಶದ ವಿಷಯಕ್ಕೆ ಬಂದರೆ, ಅತಿ ಹೆಚ್ಚ ಬಜೆಟ್‌ ಮಂಡಿಸಿದ ದಾಖಲೆ ವಜೂಭಾಯಿ ವಾಲಾ ಹೆಸರಿನಲ್ಲಿದೆ. ಗುಜರಾತ್‌ ಹಣಕಾಸು ಸಚಿವರಾಗಿದ್ದ ಅವರು, 18 ಬಜೆಟ್‌ ಮಂಡಿಸಿದ್ದು ದಾಖಲೆ.

ಕರ್ನಾಟಕ ಬಜೆಟ್ 2025 ಮಂಡನೆ ಶುಕ್ರವಾರ (ಮಾರ್ಚ್‌ 7) ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಶುಕ್ರವಾರ ಬೆಳಿಗ್ಗೆ 10.15 ಗಂಟೆಗೆ ಬಜೆಟ್ ಭಾಷಣ ಶುರುಮಾಡಲಿದ್ದಾರೆ. ಕರ್ನಾಟಕ ಬಜೆಟ್ 2025 ಮಂಡಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಭಾಷಣವನ್ನು ವಿಧಾನ ಮಂಡಲದ ವೆಬ್‌ಕಾಸ್ಟ್‌ನಲ್ಲಿ ನೇರ ಪ್ರಸಾರ ನೋಡಬಹುದು. ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಮಾಡುವಾಗ ಅದರ ನೇರ ಪ್ರಸಾರವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಯೂಟ್ಯೂಬ್ ಚಾನೆಲ್‌ನಲ್ಲಿ ನೀವು ವೀಕ್ಷಿಸಬಹುದು. ಇದಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ಭಾಷಣದ ಲೈವ್ ಅಪ್ಡೇಟ್ಸ್ ಅನ್ನು ಹಿಂದೂಸ್...