ಭಾರತ, ಮಾರ್ಚ್ 7 -- ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2025-26 ನೇ ಸಾಲಿಗೆ ಮಂಡಿಸಿದ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂಪಾಯಿ ದಾಟಿದೆ. ಕರ್ನಾಟಕದ ಆರ್ಥಿಕ ಇತಿಹಾಸದಲ್ಲಿ ಇದು ದಾಖಲೆ ಎನಿಸಿದೆ. ಈ ಬಾರಿಯ ಬಜೆಟ್‌ನ ಒಟ್ಟು ಗಾತ್ರವು 4,09,549 ಕೋಟಿ ರೂಪಾಯಿ. ಕಳೆದ ವರ್ಷ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ನ ಗಾತ್ರ 3.71 ಲಕ್ಷ ಕೋಟಿ ರೂಪಾಯಿ ಇತ್ತು.

ಮೈಸೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ 150 ಎಕರೆ ಮಂಜೂರು

500 ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿ.

ಗದಗ ಜಿಲ್ಲೆ ಡಂಬಳಕ್ಕೆ ತೋಟಗಾರಿಕೆ ಕಾಲೇಜು ಮಂಜೂರು

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಕೃಷಿ ಕಾಲೇಜು ಮಂಜೂರು

ವಿಜಯಪುರ ಜಿಲ್ಲೆ ಮುದ್ದೆ ಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ಆರಂಭ

ಕರ್ನಾಟಕ ರಾಜ್ಯದ ಆರ್ಥಿಕ ಆರೋಗ್ಯದ ಬಗ್ಗೆಯೂ ಬಜೆಟ್‌ ದಾಖಲೆ ಬೆಳಕು ಚೆಲ್ಲಿದೆ. ಕರ್ನಾಟಕ ರಾಜ್ಯವು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದ್ದು, ದೇಶದ ಜಿಡಿಪಿಗೆ ಶೇ 8.4ರಷ್ಟು ಕೊಡುಗೆ ನೀಡಿದೆ. 2024-25ನೇ ಸಾಲಿನಲ್ಲಿ ರಾಜ್ಯ...