Dakshina kannada, ಮಾರ್ಚ್ 7 -- Karnataka Budget 2025: ಮೊನ್ನೆ ವಿಧಾನಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ನೈಟ್ ಲೈಫ್' ಉತ್ತೇಜಿಸುವ ವಿಚಾರ ಸ್ವಾರಸ್ಯಕರ ಚರ್ಚೆಗೆ ಕಾರಣವಾಗಿತ್ತು. ಕರಾವಳಿಯನ್ನು ಕೋಮುದ್ವೇಷದ ಅಮಲಿನಿಂದ ಹೊರತಂದು ನೈಟ್ ಲೈಫ್ ನ ಪ್ರಪಂಚಕ್ಕೆ ಪರಿಚಯಿಸುವ ಮೂಲಕ ಇಲ್ಲಿನ ಬ್ಯುಸಿನೆಸ್ ಕಲ್ಚರ್ ಅನ್ನು ಬೆಂಗಳೂರು ರೀತಿಯಲ್ಲಿ ಮಾಡುವ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗಳಾಗಿದ್ದವು. ನೈಟ್ ಲೈಫ್ ಆಗುತ್ತೋ, ಬಿಡುತ್ತೋ.. ಆದರೆ ಡೇ ಲೈಫ್ ಗಾಗಿಯಾದರೂ ವಾಸ್ತವದಲ್ಲಿ ಕಾರ್ಯರೂಪಕ್ಕೆ ಕನಿಷ್ಠ ಒಂದು ವರ್ಷದಲ್ಲಿ ಬರುವಂಥ ಯಾವುದೇ ಯೋಜನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ. ಇದು ಕರಾವಳಿ ಭಾಗದ ಜನರಿಗೆ ಬೇಸರವನ್ನಂತೂ ತರಿಸಿದೆ.

ಸ್ವತಃ ಕಾನೂನು ಪದವೀಧರರಾದ ಸ್ಪೀಕರ್ ಯು.ಟಿ.ಖಾದರ್, ನ್ಯಾಯವಾದಿಯಾಗಿರುವ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಸಹಿತ ಪ್ರಮುಖರೆಲ್ಲರೂ ಕರಾವಳಿಗೆ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂಬ ಕಳಕಳಿಯಿಂದ ಹೋರಾಟವೊಂ...