Bangalore, ಮಾರ್ಚ್ 5 -- Karnataka Budget 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬೆಂಗಳೂರಿಗೆ ಹೊಸ ಕಾಯಕಲ್ಪ ಮೂಡಿ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರಲ್ಲೂ ಶಿವಕುಮಾರ್‌ ಅವರು ಬೆಂಗಳೂರು ಉಸ್ತುವಾರಿ ವಹಿಸಿಕೊಂಡ ನಂತರವಂತೂ ಅಭಿವೃದ್ಧಿ ಶರವೇಗ ಪಡೆದುಕೊಳ್ಳಲಿದೆ ಎಂದು ಭಾವಿಸಲಾಗಿತ್ತು. ಆದರೆ ಎಲ್ಲ ನಂಬಿಕೆಗಳೂ ಹುಸಿಯಾಗಿವೆ. 'ಬ್ರ್ಯಾಂಡ್ ಬೆಂಗಳೂರು' ಪರಿಕಲ್ಪನೆ ಕೇವಲ ಮರೀಚಿಕೆಯಾಗಿದೆ. ಬರೀ ಹೇಳಿಕೆಗಳಿಗೆ ಬ್ರಾಂಡ್‌ ಬೆಂಗಳೂರು ಸೀಮಿತವಾಯಿತೇ ಎನ್ನುವ ಪ್ರಶ್ನೆ ಬೆಂಗಳೂರು ನಿವಾಸಿಗರನ್ನು ಕಾಡತೊಡಗಿದೆ. ಬೆಂಗಳೂರು ರಾಜಧಾನಿ ಕೇಂದ್ರ ಮಾತ್ರವಾಗಿರದೇ ಅದೊಂದು ಉದ್ಯಮ- ಉದ್ಯೋಗ ನಗರಿಯೂ ಹೌದು. ಇದೆ ನೆಲೆಯಲ್ಲೇ ಬ್ರಾಂಡ್‌ ಬೆಂಗಳೂರು ರೂಪಿಸುವ ಪ್ರಯತ್ನವಾದರೂ ಅದು ಮುಂದಕ್ಕೆ ಹೋಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಇದಕ್ಕೊಂದು ಬಲ ತುಂಬಬಲ್ಲರೇ ಎನ್ನುವ ಪ್ರಶ್ನೆಯೂ ಇದೆ.

ಮುಖ್ಯವಾಗಿ ಬೆಂಗಳೂರಿನ ನಾಗರೀಕರು ...