Bangalore, ಮಾರ್ಚ್ 7 -- Karnataka Budget 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಬಜೆಟ್‌ನಲ್ಲಿ ಈ ಬಾರಿ ಕೊಂಚ ಹೆಚ್ಚೇ ಔದಾರ್ಯ ತೋರಿದ್ದಾರೆ. ಹಿಂದಿನ ಬಜೆಟ್‌ನಲ್ಲಿ ತವರು ಜಿಲ್ಲೆಯಾದ ಮೈಸೂರಿಗೆ ಒತ್ತು ಸಿಕ್ಕಿರಲಿಲ್ಲ. ಈ ಬಾರಿ ಬಸ್‌ನಿಲ್ದಾಣ, ರೇಷ್ಮೆ ಗೂಡಿನ ಮಾರುಕಟ್ಟೆ, ಶತಮಾನ ಆಚರಿಸಿಕೊಂಡು ಮೈಸೂರು ಮೆಡಿಕಲ್‌ ಕಾಲೇಜಿಗೆ ಡಬಲ್‌ ನೂರು ಕೋಟಿ ರೂ. ಅಗ್ನಿಶಾಮಕ ದಳದ ಘಟಕ ಸ್ಥಾಪನೆಗೆ ಒತ್ತು ಕೊಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ತಮ್ಮ ರಾಜಕೀಯ ಗುರು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಸಂಶೋಧನಾ ಪೀಠ ಆರಂಭದ ಕಾರ್ಯಕ್ರಮವೂ ಸೇರಿದೆ. ಈಗಾಗಲೇ ಬಹುತೇಕ ಎಲ್ಲಾ ಕಲಾವಿದರು ನಿವೃತ್ತಿಯಾದ ನಂತರ ಪುನಶ್ಚೇತನಕ್ಕೆ ಕಾಯುತ್ತಿರುವ ಕರ್ನಾಟಕದ ಹಳೆಯ ಹಾಗೂ ಪ್ರತಿಷ್ಠಿತ ರೆಪರ್ಟರಿಯಾದ ರಂಗಾಯಣಕ್ಕೂ ಅನುದಾನವನ್ನು ಒದಗಿಸಿದ್ದಾರೆ. ಮೈಸೂರಿನಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯ ಸ್ಥಾಪನೆಗೂ ಆದ್ಯತೆ ನೀಡಿದ್ದಾರೆ ಸಿದ್ದರಾಮಯ್ಯ. ಕೆಲ ದಿನಗಳ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹ...