Bengaluru, ಮಾರ್ಚ್ 23 -- Karnataka Bandh: ಕರ್ನಾಟಕದಲ್ಲಿ ಮರಾಠಿಗರ ಕನ್ನಡ ವಿರೋಧಿ ನೀತಿ, ಎಂಇಎಸ್ ಪುಂಡಾಟಿಕೆ, ಮಹದಾಯಿ, ಮೇಕೆದಾಟು ಜಲ ಯೋಜನೆ, ಕನ್ನಡಿಗರಿಗೆ ಉದ್ಯೋಗ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕರ್ನಾಟಕ ಬಂದ್ ಶನಿವಾರ (ಮಾರ್ಚ್ 22) ಪ್ರತಿಭಟನೆಗೆ ಸೀಮಿತವಾಯಿತು. ಕರ್ನಾಟಕ ಸರ್ಕಾರ ಕರ್ನಾಟಕ ಬಂದ್ ನಡೆಸುವುದಕ್ಕೆ ಅವಕಾಶ ಇಲ್ಲ ಎಂದು ಹೇಳಿದ ಕಾರಣ, ಕರ್ನಾಟಕ ಬಂದ್ ನಡೆಯಲಿಲ್ಲ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಇತ್ತು. ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಕನ್ನಡ ಪರ ಸಂಘಟನೆಗಳ ಕರ್ನಾಟಕ ಬಂದ್ ಕರೆ ಕಾರಣ, ಬೆಂಗಳೂರಿನಲ್ಲಿ ಶನಿವಾರ ಸಂಚಾರ ದಟ್ಟಣೆ ಕಡಿಮೆ ಇತ್ತು. ಬೆಳಿಗ್ಗೆಯಿಂದಲೂ ಆಟೊ, ವಾಹನ ಗಳ ಸಂಚಾರ ಹಾಗೂ ಹೋಟೆಲ್‌, ಅಂಗಡಿ ವ್ಯಾಪಾರ, ತರಕಾರಿ, ಹಣ್ಣು- ಹೂವಿನ ಮಾರುಕಟ್ಟೆಗಳಲ್ಲಿ ವಹಿವಾಟು ಎಂದಿನಂತೆ ನಡೆಯಿತು. ಸರ್ಕಾರಿ, ಖಾಸಗಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳು ಸಹ ಎಂದಿ ನಂತೆಯೇ ಕಾರ್ಯನಿರ್ವಹಿಸಿದವು. ಎಲ್ಲ ಮಾಲ್‌ಗಳು ತೆರೆದಿದ್...