Bengaluru, ಮಾರ್ಚ್ 20 -- Karnataka Bandh: ಬೆಳಗಾವಿಯಲ್ಲಿ ಕರ್ನಾಟಕದ ಬಸ್‌ ಕಂಡಕ್ಟರ್‌ ಮೇಲೆ ಮರಾಠಿಗರಿಂದ ನಡೆದ ಹಲ್ಲೆ ಖಂಡಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಈ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಬೆಂಬಲ ವ್ಯಕ್ತಪಡಿಪಡಿಸಿದೆ. ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಕನ್ನಡ ಚಿತ್ರರಂಗ ಕರ್ನಾಟಕ ಬಂದ್‌ಗೆ ತನ್ನ ಬೆಂಬಲ ನೀಡುತ್ತಿದೆ, ಆದರೆ ಯಾವುದೇ ಚಿತ್ರೀಕರಣ ಬಂದ್ ಮಾಡಲಾಗಲ್ಲ ಎಂದರು.

ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲ ಇರಲಿದೆಯಾದರೂ ಸಿನಿಮಾ ಚಿತ್ರೀಕರಣಗಳನ್ನು ನಿಲ್ಲಿಸಲಾಗುತ್ತಿಲ್ಲ. ಚಿತ್ರಪ್ರದರ್ಶಕರು ಸಹ ಬಂದ್‌ಗೆ ತಮ್ಮ ಬೆಂಬಲ ನೀಡಿದ್ದು, ಅಂದು ಬೆಳಗಿನ ಶೋ ನಿಲ್ಲಿಸುತ್ತಿದ್ದಾರೆ. ಆದರೆ ಮಧ್ಯಾಹ್ನದ ನಂತರ ಎಂದಿನಂತೆ ಶೋ ನಡೆಯಲಿವೆ.

ಇದನ್ನೂ ಓದಿ: ಹಳೇ ಧಾರಾವಾಹಿಗಳ ಮುಂದೆ ಹೊಸ ಸೀರಿಯಲ್‌ಗಳು ಸಪ್ಪೆ ಸಪ್ಪೆ; ಟಿಆರ್‌ಪಿ ರೇಸ್‌ನಲ್ಲಿ ಕಲರ್ಸ್‌ ಕನ್ನಡದ ಕಿಂಗ್‌ ಯಾರು?...