Bangalore, ಮಾರ್ಚ್ 22 -- Karnataka Bandh: : ಮರಾಠಿಗರ ನಡವಳಿಕೆ, ಕರ್ನಾಟಕದಲ್ಲಿನ ನೀರಾವರಿ ಯೋಜನೆಗಳ ಜಾರಿಯೂ ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ಭಾಗದಲ್ಲಿ ಬಂದ್‌ಗೆ ಬೆಂಬಲ ನೀಡಿದರೆ ಇನ್ನು ಕೆಲವು ಕಡೆಗಳಲ್ಲಿ ಹೋರಾಟಕ್ಕೆ ಬಂದ್‌ ಸೀಮಿತವಾಯಿತು. ಭಾಗಶಃ ಬಂದ್‌ ಯಶಸ್ವಿಯಾಯಿತು. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದವು. ಬಸ್‌ಗಳ ಸೇವೆಯನ್ನು ಚಿಕ್ಕಮಗಳೂರು ಸಹಿತ ಕೆಲವು ಕಡೆ ಸ್ಥಗಿತಗೊಳಿಸಿದ್ದರೆ, ಬೆಂಗಳೂರಿನಲ್ಲಿ ಯಥಾ ರೀತಿಯಾಗಿತ್ತು. ಆದರೆ ಪ್ರಯಾಣಿಕರ ಸಂಖ್ಯೆಯೇ ಕಡಿಮೆಯಿತ್ತು. ಮೈಸೂರು ಸಹಿತ ಹಲವು ಭಾಗ ಸಂಚಾರಕ್ಕೆ ಅಡ್ಡಿಪಡಿಸಿದವರನ್ನು ಪೊಲೀಸರು ಬಂಧಿಸಿದರು. ಬೆಂಗಳೂರಿನಲ್ಲೂ ಮೆಟ್ರೋಗೆ ಅಡ್ಡಿಪಡಿಸಲು ಮುಂದಾದವರನ್ನು ವಶಕ್ಕೆ ಪಡೆಯಲಾಯಿತು. ಮಧ್ಯಾಹ್ನ 12ರ ಹೊತ್ತಿಗೆ ಅಲ್ಲಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದವು.

ಬೆಂಗ...