Mangalore, ಏಪ್ರಿಲ್ 8 -- Karnataka 2nd PUC Result: ಮಂಗಳೂರಿನ ವೆನ್ಲಾಕ್ ನಲ್ಲಿ ತಜ್ಞ ವೈದ್ಯರಾಗಿರುವ ಡಾ. ದಿನೇಶ್ ಕಾಮತ್ ಮತ್ತು ಬಿ.ಸಿ.ರೋಡಿನಲ್ಲಿ ಮಕ್ಕಳ ತಜ್ಞ ವೈದ್ಯರಾಗಿರುವ ಡಾ. ಅನುರಾಧಾ ಕಾಮತ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಇಬ್ಬರೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಕರಾಗಲು ಹೊರಟಿದ್ದಾರೆ. ಇಂದು ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಅಮೂಲ್ಯ ಕಾಮತ್ 599 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದರೆ, 2019ರಲ್ಲಿ ಈಕೆಯ ಅಕ್ಕ ಅನುಪಮಾ ಕಾಮತ್ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದಳು

ಅಪ್ಪ, ಅಮ್ಮ ಡಾಕ್ಟರ್ ಆಗಿದ್ದರೂ ಮಕ್ಕಳಿಗೆ ಕಂಪ್ಯೂಟರ್ ಮೇಲೆ ಹೆಚ್ಚು ಆಸಕ್ತಿ. ಹೀಗಾಗಿ ೨೦೧೯ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎರಡನೇ ರ್‍ಯಾಂಕ್ ಗಳಿಸಿದ್ದ ಈ ವೈದ್ಯದಂಪತಿಯ ಮೊದಲ ಮಗಳು ಅನುಪಮಾ ಕಾಮತ್ ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡು, ಇಂಜಿನಿಯರಿಂಗ್ ಪದವಿಯನ್ನು ಬೆಂಗಳೂರಿನ ಪಿಇಎಸ್ ಯುನಿವರ್ಸಿಟಿಯಲ್ಲಿ ಮಾಡಿ ಇದೀಗ ಐಟಿ ಕಂಪನಿಯೊಂದರಲ್ಲಿ ಉದ್ಯ...