ಭಾರತ, ಮಾರ್ಚ್ 21 -- Karimani Serial: ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಕರಿಮಣಿ'ಯ 'ಬ್ಲ್ಯಾಕ್ ರೋಜ್' ಪಾತ್ರ ಜನರಿಗೆ ಅತ್ಯಂತ ಕುತೂಹಲ ಹುಟ್ಟಿಸಿದ ನೆಗೆಟಿವ್ ಪಾತ್ರ. ಕಥಾ ನಾಯಕ ಕರ್ಣನನ್ನು ನಾಶ ಮಾಡುವ ಏಕೈಕ ಉದ್ದೇಶ ಇರೋ ಈ 'ಬ್ಲ್ಯಾಕ್ ರೋಜ್' ಯಾರು ಎನ್ನುವುದು ಪ್ರೇಕ್ಷಕರಿಗೆ ಯಕ್ಷಪ್ರಶ್ನೆಯಾಗಿತ್ತು. ಆ ಯಕ್ಷಪ್ರಶ್ನೆಗೆ ಕೊನೆಗೂ ಉತ್ತರ ಸಿಗಲಿದೆ. ಮಾರ್ಚ್ 24ರಂದು ಸೋಮವಾರ ಸಂಜೆ 6ಕ್ಕೆ ಕರಿಮಣಿ ಧಾರಾವಾಹಿಯ "ಬ್ಲ್ಯಾಕ್ ರೋಜ್' ಯಾರು ಎಂಬ ರಹಸ್ಯ ಬಯಲಾಗಲಿದೆ.

'ಕರಿಮಣಿ' ಧಾರಾವಾಹಿಯ ಆಸಕ್ತಿಕರ ಅಂಶವೆಂದರೆ, ಇಲ್ಲಿ ಅತ್ಯಂತ ವಿಶಿಷ್ಟ ಪಾತ್ರಗಳಿರುತ್ತವೆ. ಒಂದು ರೆಗ್ಯುಲರ್ ಚೌಕಟ್ಟಿನಲ್ಲಿ ಇರದ ವಿಕ್ಷಿಪ್ತ ಅನಿಸುವ ಆದರೆ ಮನರಂಜನೆಗೆ ಮೋಸ ಮಾಡದ ಈ ಪಾತ್ರಗಳಲ್ಲಿ ಒಂದು "ಬ್ಲ್ಯಾಕ್ ರೋಜ್' ಪಾತ್ರ. 'ಕರಿಮಣಿ' ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ಜನರಿಗೆ ಪ್ರೀತಿಪಾತ್ರ ಆಗುವಲ್ಲಿ ಕತೆಗಾರ ಸೋಮು ಹೊಯ್ಸಳ ಅವರ ಪಾತ್ರವೂ ಇದೆ. ಸೋಮು ಹೊಯ್ಸಳ ಸೃಷ್ಟಿಸಿದ ಈ ಪಾತ್ರ ಯಾರಿವನು ಡ್ರೀಮ್ ಬಾಯ್ ಅಂತೆಲ್ಲ ಯೋಚಿಸೋ ಪಾ...