Bengaluru, ಮಾರ್ಚ್ 8 -- Kapati Review: ಇಂದಿನ ಜಗತ್ತಿನಲ್ಲಿ, ಬಹುತೇಕ ಎಲ್ಲರೂ ತಮ್ಮ ದೈನಂದಿನ ಕೆಲಸಗಳಿಗಾಗಿ ತಂತ್ರಜ್ಞಾನವನ್ನು ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳನ್ನು ಅವಲಂಬಿಸಿದ್ದಾರೆ. ತಂತ್ರಜ್ಞಾನವು ನಮ್ಮ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆಯೆಂದರೆ, ಅದು ಇಲ್ಲದೆ ಬದುಕುವುದನ್ನು ಊಹಿಸಿಕೊಳ್ಳುವುದು ಕಷ್ಟ. ಇದರಿಂದ ಡಿಜಿಟಲ್ ವಂಚನೆ, ಡೇಟಾ ಕಳ್ಳತನ ಮತ್ತು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. 'ಕಪಟಿ' ಅಂತಹ ಆಧುನಿಕ ತಂತ್ರಜ್ಞಾನದ ಹಿಂದಿರುವ ಹಲವು ಅಪಾಯಗಳ ಕುರಿತಾದ ಒಂದು ಚಿತ್ರ.

ಒಂದು ಕಾಲಕ್ಕೆ ಸಂತೋಷದ ಜೀವನ ನಡೆಸಿದ್ದ ಪ್ರಿಯಾಗೆ (ಸುಕೃತಾ ವಾಗ್ಲೆ) ಈಗ ಹಲವು ಸಂಕಷ್ಟಗಳು ಎದುರಾಗಿವೆ. ಮುದ್ದಿನ ತಮ್ಮ ಹಾಸಿಗೆ ಹಿಡಿದು ಮಲಗಿದರೆ, ಆಕೆ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾಳೆ. ಹೀಗಿರುವಾಗಲೇ, ಅವಳ ಮನೆಯಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತವೆ. ಯಾರೋ ಮನೆಯಲ್ಲಿ ಓಡಾಡುತ್ತಿರುವ ಅನುಭವವಾಗುತ್ತದೆ. ಇದು ಆಕೆಯ ಭ್ರಮೆಯಾ? ಅಥವಾ ಯಾರಾದರೂ ಅವಳಿಗೆ ಹೀಗೆ ಹೆದರಿಸುತ್ತಿದ್ದಾರಾ? ಎಂಬುದೇ ಚಿತ್ರ...