ಭಾರತ, ಮಾರ್ಚ್ 19 -- Kantara Vs Forest: ಕಾಂತಾರ ಸಿನಿಮಾದ ಯಶಸ್ಸಿಗೆ ಕಾರಣವೇನು? ಆ ಸಿನಿಮಾ ಇತರ ಸಿನಿಮಾಗಳಿಗಿಂತ ಭಿನ್ನವಾಗಿತ್ತು. ಪ್ರೇಕ್ಷಕರನ್ನು ಅನಿರೀಕ್ಷಿತವಾಗಿ ಬೆಚ್ಚಿ ಬೀಳಿಸಿ ರೋಮಾಂಚನಗೊಳಿಸುವ ಶಕ್ತಿ ಅದಕ್ಕಿತ್ತು. ಭಯ, ಭಕ್ತಿಯ ಸಮಿಶ್ರವಿತ್ತು. ಇದೆಲ್ಲದಕ್ಕಿಂತ ಈ ಸಿನಿಮಾವನ್ನು ಕಟ್ಟಿಕೊಟ್ಟ ರೀತಿ ಅದ್ಭುತವಾಗಿತ್ತು. ಪ್ರತಿಯೊಂದು ಸೀನ್‌ಗಳಲ್ಲಿಯೂ ರಿಷಬ್‌ ಶೆಟ್ಟಿ ಅವರ ಶ್ರದ್ಧೆ ಕಾಣಿಸುತ್ತಿತ್ತು. ಆದರೆ, ಕನ್ನಡದಲ್ಲಿ ಫಾರೆಸ್ಟ್‌ ಎಂಬ ಸಿನಿಮಾ ಬಂದಿತ್ತು. ಈಗ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಕನ್ನಡದಲ್ಲಿ ಕಾಂತಾರ ಎಂದರೆ ಕಾಡು ಎಂದರ್ಥ. ಇಂಗ್ಲಿಷ್‌ನ ಫಾರೆಸ್ಟ್‌ ಕನ್ನಡದಲ್ಲಿ ಕಾಡು ಆಗುತ್ತದೆ. ಎರಡೂ ಸಿನಿಮಾಗಳಲ್ಲಿ ಕಾಡು ಇದೆ. ಆದರೆ, ಪ್ರೇಕ್ಷಕರನ್ನು ಕಾಡುವ ಸಿನಿಮಾವಾಗಿ ಕಾಂತಾರ ಹೊರಹೊಮ್ಮಿತ್ತು.

ಅನೀಶ್ ತೇಜೇಶ್ವರ್, ಚಿಕ್ಕಣ್ಣ, ಗುರುನಂದನ್, ಅರ್ಚನಾ ಕೊಟ್ಟಿಗೆ, ಶರಣ್ಯ ಶೆಟ್ಟಿ, ರಂಗಾಯಣ ರಘು ನಟಿಸಿರುವ ಫಾರೆಸ್ಟ್‌ ಸಿನಿಮಾಕ್ಕೆ ಕನ್ನಡದ ಇನ್ನೊಂದು "ಕಾಂತಾರ"ವಾಗುವ ಎಲ್ಲಾ ಲಕ್ಷಣಗಳು ...