Bangalore, ಏಪ್ರಿಲ್ 3 -- Kantara: Chapter 1: ಕಾಂತಾರ ಚಾಪ್ಟರ್‌ 1 ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನದ ಈ ಚಿತ್ರ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈಗಾಗಲೇ ಕಾಂತಾರ ಸಿನಿಮಾದ ಮೂಲಕ ಪ್ರೇಕ್ಷಕರಲ್ಲಿ ರೋಮಾಂಚನ ಉಂಟು ಮಾಡಲಾಗಿದೆ. ಇದರ ಹಿಂದಿನ ಕಥೆ ಚಾಪ್ಟರ್‌ 1ರ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಮುಂಬರುವ ಕಾಂತಾರ ಸಿನಿಮಾದ ಕುರಿತು ವದಂತಿ ಹರಿದಾಡಿತ್ತು. ರಿಷಬ್‌ ಶೆಟ್ಟಿಯ ಕಾಂತಾರ ಚಾಪ್ಟರ್‌ 1 ಸಿನಿಮಾ ಅಂದುಕೊಂಡ ಸಮಯದಲ್ಲಿ ಬಿಡುಗಡೆಯಾಗದು, ಚಿತ್ರ ಬಿಡುಗಡೆ ವಿಳಂಬವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಚಿತ್ರತಂಡ ಈ ಸಿನಿಮಾದ ಬಿಡುಗಡೆ ಕುರಿತು ಖಚಿತಗೊಳಿಸಿದೆ. ಒಂದು ಫನ್‌ ವಿಡಿಯೋ ಹಂಚಿಕೊಳ್ಳುವ ಮೂಲಕ ನಿಗದಿತ ದಿನಾಂಕದಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ. ಇದು ಈ ಚಿತ್ರದ ಕುರಿತು ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ.

ಹೊಂಬಾಳೆ ಫಿಲ್ಮ್ಸ್‌ ಕಾಂತಾರ ಚಾಪ್ಟರ್‌ 1ರ ಬಿಡು...