ಬೆಂಗಳೂರು, ಮಾರ್ಚ್ 18 -- Kanneda OTT Release: ಈ ವಾರ ಭಾರತದ ಒಟಿಟಿಗಳಲ್ಲಿ ವಿವಿಧ ಸಿನಿಮಾಗಳು ಬಿಡುಗಡೆಯಾಗಲು ಸರತಿಯಲ್ಲಿವೆ. ಜಿಯೋಹಾಟ್‌ಸ್ಟಾರ್‌ ಸಾಕಷ್ಟು ಹೊಸ ಸಿನಿಮಾ, ವೆಬ್‌ ಸರಣಿಗಳನ್ನು ಪರಿಚಯಿಸುತ್ತಿದೆ. ಇದರ ಮೊದಲ ಜಾಗತಿಕ ಕಾರ್ಯಕ್ರಮವಾದ ಡೇರ್‌ಡೆವಿಲ್: ಬಾರ್ನ್ ಎಗೇನ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೀಗ ಜಿಯೋಹಾಟ್‌ಸ್ಟಾರ್‌ ತನ್ನ ಮೊದಲ ಹಿಂದಿ ಭಾಷೆಯ ಸಿನಿಮಾ ಪರಿಚಯಿಸಲು ಸಿದ್ದವಾಗಿದೆ. ಅದರ ಹೆಸರು ಕನ್ನೇಡ . ಇದು ಅಪರಾಧ ಜಗತ್ತಿನ ಸಿನಿಮಾ. ಬದುಕುವ ಹೋರಾಟವೂ ಹೌದು. ಕನ್ನೇಡ ಹೆಸರು ಮೊದಲ ನೋಟಕ್ಕೆ ಕನ್ನಡ ಎಂದು ಕಾಣಬಹುದು. ಆದರೆ, ಇದು ಕನ್ನೆಡ. ಕನ್ನಡಕ್ಕೂ ಕನ್ನೆಡಗೂ ಏನೂ ಸಂಬಂಧವಿಲ್ಲ. ಆದರೆ, ಕನ್ನೆಡಕ್ಕೂ ಕೆನಡಾಕ್ಕೂ ಸಂಬಂಧವಿದೆ. ಕನ್ನೆಡ ಸಿನಿಮಾದ ಕುರಿತು ಹೆಚ್ಚಿನ ವಿವರ ತಿಳಿಯೋಣ.

ಪ್ರತಿಭಾನ್ವಿತ ಪಂಜಾಬಿ ಯುವಕ ನಿಮ್ಜಾ ಅನಿವಾರ್ಯವಾಗಿ ಬದುಕು ಕಟ್ಟಿಕೊಳ್ಳಲು ಕೆನಡಾಕ್ಕೆ ವಲಸೆ ಹೋಗುತ್ತಾನೆ. ಒಳ್ಳೆಯತನದಿಂದ ಬದುಕಲು ಅಲ್ಲಿನ ವ್ಯವಸ್ಥೆ ಬಿಡುವುದಿಲ್ಲ. ವಲಸಿಗನ ಸಂಕ...