Bengaluru, ಮಾರ್ಚ್ 1 -- Kannappa teaser 2: ವಿಷ್ಣು ಮಂಚು ಮುಖ್ಯ ಪಾತ್ರದಲ್ಲಿ ನಟಿಸಿರುವ ತೆಲುಗು ಐತಿಹಾಸಿಕ ಚಿತ್ರ ಕಣ್ಣಪ್ಪ. ಈ ಸಿನಿಮಾ ಮುಂದಿನ ತಿಂಗಳು ಅಂದರೆ, ಏಪ್ರಿಲ್ 25ರಂದು ಚಿತ್ರಮಂದಿರಗಳಲ್ಲಿ ಪ್ಯಾನ್‌ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರವು ಬೇಟೆಗಾರ ಮತ್ತು ಯೋಧ ಭಕ್ತ ಕಣ್ಣಪ್ಪನ (ಬೇಡರ ಕಣ್ಣಪ್ಪ) ಬದುಕಿನ ಕಥೆಯನ್ನು ಆಧರಿಸಿದೆ. ಕನ್ನಡದಲ್ಲಿ ಬೇಡರ ಕಣ್ಣಪ್ಪ ಸಿನಿಮಾ ನಿಮಗೆ ನೆನಪಿರಬಹುದು. ಇದೇ ಕಥೆಯನ್ನು ದೊಡ್ಡಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. ಪ್ರಭಾಸ್‌, ಮೋಹನ್‌ಲಾಲ್‌, ಅಕ್ಷಯ್‌ ಕುಮಾರ್‌, ಕಾಜಲ್‌ ಅಗರ್‌ವಾಲ್‌ ಮುಂತಾದವರು ಈ ಚಿತ್ರದಲ್ಲಿದ್ದಾರೆ. ಇಂದು ಬಿಡುಗಡೆಯಾದ ಟೀಸರ್‌ 2ನಲ್ಲಿ ಇವರ ಲುಕ್‌ ತೋರಿಸಲಾಗಿದೆ.

ಇಂದು ಮುಂಬೈನಲ್ಲಿ ಕಣ್ಣಪ್ಪ ಟೀಸರ್ 2 ಬಿಡುಗಡೆಯಾಗಿದೆ. ಇದರಲ್ಲಿ ಪ್ರಭಾಸ್ ಮತ್ತು ಮೋಹನ್ ಲಾಲ್ ಪ್ರಮುಖ ಹೈಲೈಟ್‌ ಎಂದರೆ ತಪ್ಪಾಗದು. ಶಿವನ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಕುಮಾರ್ ಅವರ ಝಲಕ್‌ ಕೂಡ ಕಾಣಿಸಿದೆ. ಇದರೊಂದ...