Bengaluru, ಮಾರ್ಚ್ 30 -- Kannappa Postponed: ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ ಕಣ್ಣಪ್ಪ ಸಿನಿಮಾದಿಂದ ಇದೀಗ ಹೊಸ ಅಪ್‌ಡೇಟ್‌ ಸುದ್ದಿಯೊಂದು ಹೊರಬಿದ್ದಿದೆ. ಬಹುತಾರಾಗಣದ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ ಏಪ್ರಿಲ್‌ 25ರಂದು ಬಿಡುಗಡೆ ಆಗಬೇಕಿತ್ತು. ಇದೀಗ ಕಾರಣಾಂತರಗಳಿಂದ ಬಿಡುಗಡೆ ದಿನವನ್ನು ಮುಂದೂಡಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿಕೊಂಡಿದೆ.

ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಮೂಡಿಬಂದಿರುವ ಕಣ್ಣಪ್ಪ ಸಿನಿಮಾವನ್ನು ವಿಷ್ಣು ಮಂಚು ಅವರ ತಂದೆ ಮೋಹನ್‌ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಟಾಲಿವುಡ್‌ ಮಾತ್ರವಲ್ಲದೆ, ಸೌತ್‌ನ ಎಲ್ಲ ಭಾಷೆಗಳ ಕಲಾವಿದರ ಜತೆಗೆ ಬಾಲಿವುಡ್‌ನಿಂದ ಅಕ್ಷಯ್ ಕುಮಾರ್‌ ಸಹ ಈ ಸಿನಿಮಾದಲ್ಲಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲು ಸಿದ್ಧವಾಗಿತ್ತು. ಇದೀಗ, ವಿಎಫ್‌ಎಕ್ಸ್‌ ಕೆಲಸಗಳು ಮುಗಿಯದ ಕಾರಣಕ್ಕೆ ಬಿಡುಗಡೆಯನ್ನು ಮುಂದೂಡಿದ್ದಾರೆ ವಿಷ್ಣು ಮಂ...