ಭಾರತ, ಏಪ್ರಿಲ್ 28 -- ಇತ್ತೀಚಿನ ಬಹುತೇಕ ಸಿನಿ ಪ್ರೇಮಿಗಳಿಗೆ ಕ್ರೈಂ, ಥ್ರಿಲ್ಲರ್ ಸಿನಿಮಾಗಳು ಹೆಚ್ಚು ಇಷ್ಟವಾಗುತ್ತಿವೆ. ಮಲಯಾಳಂ, ತಮಿಳು, ಹಿಂದಿಯಲ್ಲಿ ಮಾತ್ರವಲ್ಲ ಕನ್ನಡದಲ್ಲೂ ಸಾಕಷ್ಟು ಥ್ರಿಲ್ಲರ್ ಸಿನಿಮಾಗಳು ಬಿಡುಗಡೆಯಾಗಿವೆ. ಕೆಲವು ಸಿನಿಮಾಗಳು ಹೆಸರು ಮಾಡಿದ್ದರೂ ಕೆಲವು ಸಿನಿಮಾಗಳು ಸಾಕಷ್ಟು ಹೆಸರು ಮಾಡಿಲ್ಲದೇ ಇರಬಹುದು. ಕನ್ನಡದಲ್ಲೂ ನೀವು ಥ್ರಿಲ್ಲರ್ ಸಿನಿಮಾ ನೋಡಬೇಕು ಅಂತಿದ್ದರೆ ಒಟಿಟಿಯಲ್ಲಿ ನೋಡಬಹುದು.

ವಿವಿಧ ಒಟಿಟಿ ವೇದಿಕೆಗಳಲ್ಲಿ ಲಭ್ಯವಿರುವ ಕನ್ನಡದ ಬೆಸ್ಟ್ 10 ಥ್ರಿಲ್ಲರ್ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ. ವಾರಾಂತ್ಯದಲ್ಲಿ ನೋಡಿ ನಿಮ್ಮ ದಿನವನ್ನು ಥ್ರಿಲ್ಲಿಂಗ್ ಆಗಿಸಿ.

2024ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕೊಲೆ ರಹಸ್ಯ ಆಧಾರಿತ ಕಥೆಯನ್ನು ಹೊಂದಿದೆ. ಸಂದೀಪ್ ಸುಂಕದ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ರಂಗಾಯಣ ರಘು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ವಿನಯ್‌ ಯುಜೆ, ನಿಧಿ ಹೆಗಡೆ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಮಯೂರ್ ಅಂಬೇಕಲ್ಲು ಈ ಚಿತ್ರ...