Bengaluru, ಜನವರಿ 27 -- Kannada Television: ಜನವರಿ 27.. ಇಂದು ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಬದಲಾವಣೆಗಳು ಘಟಿಸಲಿವೆ. ಕಲರ್ಸ್‌ ಕನ್ನಡದಲ್ಲಿ ವಧು ಮತ್ತು ಯಜಮಾನ ಹೆಸರಿನ ಎರಡು ಹೊಸ ಧಾರಾವಾಹಿಗಳು ಇಂದಿನಿಂದ ಪ್ರಸಾರ ಆರಂಭಿಸಿದರೆ, ಇತ್ತ ಜೀ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್‌ ಇಂದಿನಿಂದಲೇ ಶುಭಾರಂಭ ಕಾಣಲಿದೆ. ಈ ಸೀರಿಯಲ್‌ ಆಗಮನದ ಬೆನ್ನಲ್ಲೇ ತನ್ನ ಸ್ಲಾಟ್‌ ಬಿಟ್ಟು ಕೊಟ್ಟಿರುವ ಸೀತಾ ರಾಮ ಸೀರಿಯಲ್‌ ಸಂಜೆ 5:30ರಿಂದ ಪ್ರಸಾರವಾಗಲಿದೆ. ಈ ಮೂಲಕ ಹೊಸ ಅಗ್ನಿ ಪರೀಕ್ಷೆ ಈ ಸೀರಿಯಲ್‌ ಹೊರಳಿದೆ. ಸ್ಟಾರ್‌ ಸುವರ್ಣದಲ್ಲಿ ಅವನು ಮತ್ತೆ ಶ್ರಾವಣಿ ಸೀರಿಯಲ್‌ನಲ್ಲಿ ಸಂಘರ್ಷದ ಕಥೆಗೆ ವೀಕ್ಷಕರಿಗೆ ಸಿಗಲಿದೆ.

ಸಂಬಂಧಗಳನ್ನು ಪ್ರೀತಿಸೋ, ಅಷ್ಟೇ ಗೌರವಿಸುವ 'ವಧು' ಒಬ್ಬ ಅವಿವಾಹಿತೆ, ವೃತ್ತಿಯಲ್ಲಿ ಡಿವೋರ್ಸ್ ಲಾಯರ್. ಮನುಷ್ಯ ಸಂಬಂಧಗಳ ಬಗ್ಗೆ ಅವಳಿಗಿರುವ ಗೌರವವೇ ಅವಳನ್ನು ತನ್ನ ವೃತ್ತಿಯಲ್ಲಿ ಹಿಂದುಳಿಯುವಂತೆ ಮಾಡಿದೆ ಅಂದ್ರೂ ತಪ್ಪಾಗಲ್ಲ! ಗಂಡ ಹೆಂಡ್ತಿ ನಡುವೆ ಬಿರುಕು ಮೂಡಿ ಡಿವೋರ್ಸ್ ಕೇಳಿ ಬಂದ ಜೋ...