Bengaluru, ಮಾರ್ಚ್ 19 -- Kannada Serials: ಕನ್ನಡ ಕಿರುತೆರೆ ವೀಕ್ಷಕರಿಗೆ ಇದೀಗ ಶಾಕಿಂಗ್‌ ಸುದ್ದಿಯೊಂದು ಇಲ್ಲಿದೆ. ಈಗಷ್ಟೇ ಶುರುವಾಗಿದ್ದ ಸೀರಿಯಲ್‌ವೊಂದು ಇದೀಗ ಅಂತ್ಯದ ಮುನ್ಸೂಚನೆ ನೀಡಿದೆ. ಅಂದರೆ, ಸದ್ದಿಲ್ಲದೆ, ತನ್ನ ಕೊನೇ ಸಂಚಿಕೆಗಳನ್ನು ಚಿತ್ರೀಕರಣ ಮಾಡುತ್ತಿದೆ. ಈ ಮೂಲಕ ಮುಂದಿನ ಎರಡ್ಮೂರು ವಾರಗಳಲ್ಲಿ ಹೊಸ ಸೀರಿಯಲ್‌ ಶುರುವಾದಷ್ಟೇ ಬೇಗ ಅಂತ್ಯವಾಗಲಿದೆ. ಯಾವುದು ಆ‌ ಧಾರಾವಾಹಿ? ಯಾವ ವಾಹಿನಿಯಲ್ಲಿ ಆ ಸೀರಿಯಲ್‌ ಪ್ರಸಾರವಾಗುತ್ತಿದೆ? ಇಲ್ಲಿದೆ ಮಾಹಿತಿ.

ಕಳೆದ ಕೆಲ ವಾರಗಳಿಂದ ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಸಾಲು ಸಾಲು ಸೀರಿಯಲ್‌ಗಳು ಪ್ರಸಾರ ಆರಂಭಿಸಿದ್ದವು. ಅಚ್ಚರಿಯ ಪ್ರೋಮೋಗಳ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಗಮನವನ್ನೂ ಸೆಳೆದಿದ್ದವು. ಜೀ ಕನ್ನಡದಲ್ಲಿ ʻನಾ ನಿನ್ನ ಬಿಡಲಾರೆʼ ಸೀರಿಯಲ್‌ ಆರಂಭವಾದರೆ, ಅದಕ್ಕೂ ಮೊದಲು ಕಲರ್ಸ್‌ ಕನ್ನಡದಲ್ಲಿ ಕೆಲವೇ ತಿಂಗಳ ಅವಧಿಯಲ್ಲಿ ಮೂರ್ನಾಲ್ಕು ಧಾರಾವಾಹಿಗಳು ಪ್ರಸಾರ ಆರಂಭಿಸಿವೆ.

ಇದನ್ನೂ ಓದಿ: ರಾಮಾಚಾರಿ ತಲೆಯಲ್ಲಿ ಎರಡು ಸುಳಿ; ಚಾರು ಸಂಬಂಧದಲ್ಲಿ...