ಭಾರತ, ಫೆಬ್ರವರಿ 10 -- ಯಾವುದೇ ಒಂದು ವಿಷಯಕ್ಕಾಗಲಿ ಅಥವಾ ವಿಚಾರಕ್ಕಾಗಲೀ, ಪರ ಅಥವಾ ವಿರೋಧ ಎಂಬ ಎರಡು ಅಭಿಪ್ರಾಯಗಳು ಇರುತ್ತದೆ. ಆದರೆ ಭಾರತದಲ್ಲಿನ ಒಂದು ವಿಚಾರಕ್ಕೆ ಮಾತ್ರ ಪರ ಮತ್ತು ವಿರೋಧ ಎರಡೂ ಅಭಿಪ್ರಾಯಗಳಿವೆ. ಜನಸಾಮಾನ್ಯರಿಂದ ಅತ್ಯಂತ ಹೀನಾಯವಾಗಿ ತೆಗಳಿಸಿಕೊಂಡರೂ, ಈ ವಿಷಯದ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕುಸಿದಿಲ್ಲ. ಬದಲಿಗೆ ಹೆಚ್ಚುತ್ತಲೇ ಇದೆ. ಅದು ಮತ್ಯಾವುದೂ ಅಲ್ಲ..‌ ಸೀರಿಯಲ್ ಎಂಬ ಮಾಯಾಜಾಲ!

ಆದರೆ ಈ ಮಾಯಾಜಾಲ ಮೊದಲು ಹೇಗಿತ್ತೋ, ಈಗಲೂ ಹಾಗೆಯೇ ಇದೆ. ಕಾಲ ಬದಲಾಗಿರಬಹುದು. ಜನರೂ ಬದಲಾಗಿರಬಹುದು. ಆದರೆ ಈ ಧಾರಾವಾಹಿ ತಯಾರಿಸುವ ಪುಣ್ಯಾತ್ಮರ ಯೋಚನೆ ಮಾತ್ರ ಬದಲಾಗಿಲ್ಲ. ಅದು ಬದಲಾಗುವುದೂ ಇಲ್ಲ.

ಹಾಗಂತ ಶುರುವಿನಿಂದಲೂ ಇದೇ ರೀತಿ ಇತ್ತು ಎನ್ನುವ ಹಾಗಿಲ್ಲ. ಏಕೆಂದರೆ ದೂರದರ್ಶನ ಶುರುವಾದ ಹೊಸದರಲ್ಲಿ ಅತ್ಯುತ್ತಮವಾದ ಧಾರಾವಾಹಿಗಳು ಬರುತ್ತಿದ್ದವು. ಎಂಬತ್ತರ ದಶಕದವರಾದ ನಾವು ಪ್ರತಿಯೊಂದು ಧಾರಾವಾಹಿಯನ್ನೂ ಸಂಭ್ರಮದಿಂದಲೇ ನೋಡುತ್ತಿದ್ದೆವು. ಜೊತೆಗೆ ಆ ಧಾರಾವಾಹಿಗಳು ಜನರಿಗೆ ಏನಾದರೂ ಒಂದು ಸಂ...