Bengaluru, ಏಪ್ರಿಲ್ 4 -- Kannada Serial TRP: ಜೀ ಕನ್ನಡ, ಕಲರ್ಸ್‌ ಕನ್ನಡ, ಸ್ಟಾರ್‌ ಸುವರ್ಣ, ಉದಯ ಟಿವಿ ಕನ್ನಡದ ಈ ನಾಲ್ಕು ಮನರಂಜನಾ ವಾಹಿನಿಗಳ ಒಟ್ಟು 50ಕ್ಕೂ ಅಧಿಕ ಧಾರಾವಾಹಿಗಳು ಕಿರುತೆರೆ ವೀಕ್ಷಕರನ್ನು ಪ್ರತಿ ನಿತ್ಯ ರಂಜಿಸುತ್ತಿವೆ. ಆ ಪೈಕಿ ಇದೀಗ 12ನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಆ ರೇಟಿಂಗ್‌ನಲ್ಲಿ ಯಾವ ಸೀರಿಯಲ್‌ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡು ಟಾಪ್‌ ಸ್ಥಾನದಲ್ಲಿ ಮುಂದುವರಿದಿದೆ? ಅತ್ಯಂತ ಕಡಿಮೆ ಟಿಆರ್‌ಪಿ ಪಡೆದ ಸೀರಿಯಲ್‌ ಯಾವುದು? ಅದೆಲ್ಲದರ ವಿವರ ಇಲ್ಲಿದೆ.

12ನೇ ವಾರದ ಟಿಆರ್‌ಪಿ ಲೆಕ್ಕಾಚಾರದ ಪ್ರಕಾರ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಇದೀಗ 8.0 ಟಿವಿಆರ್‌ ಪಡೆದು ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಈ ಮೂಲಕ ಮತ್ತೆ ಹಳೇ ಲಯಕ್ಕೆ ಮರಳಿದೆ. ಈ ಹಿಂದೆ ಅಂದರೆ 6ನೇ ವಾರದಲ್ಲಿ ಈ ಸಿನಿಮಾ ಟಾಪ್‌ ಸ್ಥಾನದಲ್ಲಿತ್ತು. ಅಲ್ಲಿಂದೀಚೆಗೆ ಮೊದಲ ಸ್ಥಾನಕ್ಕೆ ಪೈಪೋಟಿ ನೀಡಿತ್ತು. ನಂತರದ ಎರಡನೇ ಸ್ಥಾನದಲ್ಲಿ ಇರುವ ಸೀರಿಯಲ್‌ ಲಕ್ಷ್ಮೀ ನಿವಾಸ. ಈ ಧಾರಾವಾಹಿ,7.7 ಪಡೆದುಕೊಂಡಿದೆ. ...