Bengaluru, ಮಾರ್ಚ್ 27 -- Kannada Serial TRP: ಕನ್ನಡ ಕಿರುತೆರೆಯಲ್ಲಿ ಹೊಸ ಸೀರಿಯಲ್‌ಗಳ ಜತೆಗೆ ಹಳೇ ಧಾರಾವಾಹಿಗಳೂ ತಮ್ಮ ಖದರ್‌ ಮುಂದುವರಿಸಿವೆ. ಟಿವಿ ವೀಕ್ಷಕರಿಗೆ ಹಳೇ ಬೇರಿನ ಜತೆಗೆ ಹೊಸ ಚಿಗುರು ಇಷ್ಟವಾಗುತ್ತಿದೆ. ಅಂದರೆ ಹಳೇ ಕಥೆಗಳ ಜತೆಗೆ ಹೊಸತನ ಕಥೆಗಳಿಗೂ ಮನಸು ಮಾಡಿದ್ದಾನೆ. ಅದರಂತೆ, ಇದೀಗ ಕಿರುತೆರೆ ಧಾರಾವಾಹಿಗಳ ವಾರದ ಏರಿಳಿತದ ಲೆಕ್ಕಾಚಾರ ತಿಳಿಸುವ ಟಿಆರ್‌ಪಿ ಅಂಕಿ ಅಂಶ ಹೊರಬಿದ್ದಿದೆ. ಅದರಂತೆ 11ನೇ ವಾರದ ಟಿಆರ್‌ಪಿಯಲ್ಲಿ ಕನ್ನಡದ ಯಾವ ಧಾರಾವಾಹಿ ಮೊದಲ ಸ್ಥಾನದಲ್ಲಿದೆ? ಇನ್ನುಳಿದ ಧಾರಾವಾಹಿಗಳಿಗೆ ಸಿಕ್ಕ ನಂಬರ್‌ ಎಷ್ಟು? ಎಂಬ ಮಾಹಿತಿ ಇಲ್ಲಿದೆ.

ಕಳೆದ ಎರಡ್ಮೂರು ವಾರಗಳಿಂದ ನಂಬರ್‌ 1 ಸ್ಥಾನದಲ್ಲಿಯೇ ಮುಂದುವರಿಯುತ್ತಿದ್ದ ಇತ್ತೀಚೆಗಷ್ಟೇ ಶುರುವಾದ ಹೊಸ ಸೀರಿಯಲ್‌ ನಾ ನಿನ್ನ ಬಿಡಲಾರೆ. ಇದೀಗ ಈ ಸೀರಿಯಲ್‌ 11ನೇ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ 7.5 ಟಿವಿಆರ್‌ ಪಡೆದು ಕುಸಿತ ಕಂಡಿದೆ. ಮೊದಲ ಸ್ಥಾನದ ಬದಲು ಮೂರನೇ ಸ್ಥಾನಕ್ಕೆ ಇಳಿಕೆಯಾಗಿದೆ. ಇತ್ತ ಅಣ್ಣಯ್ಯನ ಕನ್ಸಿಸ್ಟನ್ಸಿ ಓಟಕ್ಕೆ ಮತ...