Bangalore, ಮಾರ್ಚ್ 25 -- Snehada Kadalalli Kannada Serial: ಸ್ಟಾರ್‌ ಸುವರ್ಣವು ತನ್ನ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಲ್ಲಿ ಸ್ನೇಹದ ಕಡಲಲ್ಲಿ ಎಂಬ ಹೊಸ ಧಾರಾವಾಹಿಯ ಪ್ರೊಮೊ ಹಂಚಿಕೊಂಡಿದೆ. ಈ ಸೀರಿಯಲ್‌ನ ಕುರಿತು ಜನರಲ್ಲಿ ಕುತೂಹಲ ಮೂಡಿಸುವಲ್ಲಿ ಪ್ರೊಮೊ ಯಶಸ್ವಿಯಾಗಿದೆ. ಪೊಲೀಸ್‌ ಠಾಣೆ, ಮದುವೆ, ಮೊದಲ ರಾತ್ರಿ ಇತ್ಯಾದಿ ಅಂಶಗಳು ಈ ಪ್ರಮೊದಲ್ಲಿದೆ.

ನಮ್ಮನೆ ಯುವರಾಣಿ ಸೀರಿಯಲ್‌ನಲ್ಲಿ ನಟಿಸಿದ್ದ ಕಾವ್ಯಾ ಮಹಾದೇವ್‌ ಮತ್ತು ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತವಾಗಿರುವ ಚಂದು ಗೌಡ ಈ ಸೀರಿಯಲ್‌ನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರಿಬ್ಬರು ಪ್ರೇಮಿಗಳಲ್ಲ. ಸ್ನೇಹಿತರು.

ಈ ಸೀರಿಯಲ್‌ನ ಪ್ರೊಮೊ ಕುತೂಹಲಕಾರಿಯಾಗಿದೆ. ಒಬ್ಬಳು ಹುಡುಗಿ ಮಿಸ್‌ ಆಗಿದ್ದಾಳೆ ಎಂದು ವಯರ್‌ಲೆಸ್‌ ಫೋನ್‌ನಲ್ಲಿ ಧ್ವನಿ ಕೇಳಿಸುತ್ತದೆ. ಯಾವ ಗಾಡಿಯನ್ನೂ ಚೆಕ್‌ಮಾಡದೆ ಬಿಡಬೇಡಿ ಎಂಬ ಸೂಚನೆ ದೊರಕಿದೆ.

ಮದುವೆ ಉಡುಗೆಯಲ್ಲಿ ನಾಯಕಿ ಕತ್ತಲಲ್ಲಿ ಪೊಲೀಸ್‌ ಠಾಣೆಯಲ್ಲಿ ಕುಳಿತಿದ್ದಾಳೆ. "ಏನಮ...