Bengaluru, ಫೆಬ್ರವರಿ 27 -- ಏಳನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಬಿಡುಗಡೆ ಆಗಿದೆ. ಆ ಪೈಕಿ ಕನ್ನಡದ ಕಿರುತೆರೆಯ ನಾನ್‌ ಫಿಕ್ಷನ್‌ ಶೋಗಳಲ್ಲಿ ಯಾವ ರಿಯಾಲಿಟಿ ಶೋ ಟಾಪ್‌, ಇನ್ನುಳಿದ ಶೋಗಳ ಸ್ಥಿತಿಗತಿ ಏನು ಎಂಬುದನ್ನು ಇಲ್ಲಿ ತಿಳಿಯೋಣ.

ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಸರೆಗಮಪ ಶೋ ಸಹ ಒಂದು. ಹತ್ತಾರು ಸೀಸನ್‌ ಮುಗಿಸಿಕೊಂಡಿರುವ ಈ ಶೋ ಇಂದಿಗೂ, ಕನ್ನಡ ಕಿರುತೆರೆ ವೀಕ್ಷಕರ ಎವರ್‌ಗ್ರೀನ್‌ ಶೋ.

ಸರಿಗಮಪ ಸೀಸನ್‌ 20 ಕಳೆದ ವರ್ಷದ ಡಿಸೆಂಬರ್‌ 14ರಿಂದ ಶುರುವಾಗಿತ್ತು. ಒಂದಷ್ಟು ವಿಶೇಷತೆಗಳ ಜತೆಗೆ ಹೊಸ ಸೀಸನ್‌ ಆರಂಭಿಸಿತ್ತು.

ಅರ್ಜುನ್‌ ಜನ್ಯ, ವಿಜಯ್‌ ಪ್ರಕಾಶ್‌, ರಾಜೇಶ್‌ ಕೃಷ್ಣನ್‌ ಈ ಶೋನ ತೀರ್ಪುಗಾರರಾದರೆ, ಅನುಶ್ರೀ ನಿರೂಪಣೆ ಜವಾಬ್ದಾರಿ ಹೊತ್ತಿದ್ದಾರೆ.

ಇದೀಗ ಇದೇ ಶೋನ ಏಳನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರ ಬಿದ್ದಿದೆ. ಅಚ್ಚರಿ ವಿಚಾರ ಏನೆಂದರೆ ಡಬಲ್‌ ಡಿಜಿಟ್‌ ಕ್ರಾಸ್‌ ಮಾಡಿದೆ. 10.5 ಟಿಆರ್‌ಪಿ ಮೂಲಕ ಮುಂದಡಿ ಇರಿಸಿದೆ.

ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆ, ಫೆ...