Bengaluru, ಮಾರ್ಚ್ 15 -- Kannada OTT Movies: ಪರಭಾಷೆಗಳಿಗೆ ಹೋಲಿಕೆ ಮಾಡಿದರೆ, ಕನ್ನಡದ ಹೆಚ್ಚೆಚ್ಚು ಸಿನಿಮಾಗಳು ಒಟಿಟಿ ಅಂಗಳಕ್ಕೆ ಬರುವುದು ತೀರಾ ಕಡಿಮೆ. ಸ್ಟಾರ್‌ ನಟರ ಸಿನಿಮಾಗಳೋ, ಸದ್ದು ಮಾಡಿದ ಹೊಸಬರ ಸಿನಿಮಾಗಳೋ, ಒಳ್ಳೆಯ ಗುಣಮಟ್ಟದ ಸಿನಿಮಾಗಳೋ ಒಟಿಟಿಯಲ್ಲಿ ಕಂಡರೆ, ಇನ್ನು ಕೆಲವು ಚಿತ್ರಗಳು ಚಿತ್ರಮಂದಿರದ ಬಳಿಕ ಕಣ್ಮರೆಯಾದ ಉದಾಹರಣೆಗಳಿವೆ. ತೆಲುಗು, ತಮಿಳು, ಮಲಯಾಳಂನ ಸಾಕಷ್ಟು ಹೊಸ ಕಂಟೆಂಟ್‌ಗಳು ವಾರ ವಾರ ಸ್ಟ್ರೀಮಿಂಗ್‌ ಆರಂಭಿಸಿರುತ್ತವೆ. ಇದೀಗ ಕನ್ನಡದ ಎರಡು ಸಿನಿಮಾಗಳು, ಸದ್ದು ಗದ್ದಲವಿಲ್ಲದೆ, ಒಟಿಟಿಗೆ ಆಗಮಿಸಿವೆ. ಇಲ್ಲಿದೆ ಆ ಚಿತ್ರಗಳ ಕುರಿತ ಮಾಹಿತಿ.

ಅಡ್ವೆಂಚರ್ಸ್ ಕಾಮಿಡಿ ಕಥಾಹಂದರದ ಫಾರೆಸ್ಟ್‌ ಸಿನಿಮಾಒಟಿಟಿ ಅಂಗಳಕ್ಕೆ ಆಗಮಿಸಿದೆ. ಇದೇ ವರ್ಷದ ಜನವರಿ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ, ಇದೀಗ ಸುದೀರ್ಘ 45 ದಿನಗಳ ಬಳಿಕ ಒಟಿಟಿಗೆ ಎಂಟ್ರಿಕೊಟ್ಟಿದೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ...