ಭಾರತ, ಮಾರ್ಚ್ 7 -- Royal Movie OTT: ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ದಿನಕರ್‌ ತೂಗುದೀಪ ಆಕ್ಷನ್‌ ಕಟ್‌ ಹೇಳಿದ್ದ ರಾಯಲ್‌ ಸಿನಿಮಾ ಜನವರಿ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ವಿಮರ್ಶೆ ದೃಷ್ಟಿಯಿಂದಲೂ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ದಿನಕರ್‌ ತೂಗುದೀಪ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೆ, ದರ್ಶನ್‌ ಅಭಿಮಾನಿ ವಲಯದಲ್ಲಿಯೂ ಈ ಸಿನಿಮಾ ಬಗ್ಗೆ ದೊಡ್ಡ ಕ್ರೇಜ್‌ ಇತ್ತು. ಆದರೆ, ಚಿತ್ರ ಹೇಳಿಕೊಳ್ಳುವ ಯಶಸ್ಸಿನತ್ತ ಮುನ್ನಡೆಯಲಿಲ್ಲ. ಹೀಗಿರುವಾಗಲೇ ಇದೇ ಸಿನಿಮಾ ಇದೀಗ ಚಿತ್ರಮಂದಿರಗಳಲ್ಲಿ ತೆರೆಕಂಡು, 40 ದಿನಗಳ ಬಳಿಕ ಒಟಿಟಿಗೆ ಆಗಮಿಸಿದೆ.

ಕಿಸ್‌ ಸಿನಿಮಾ ಮೂಲಕವೇ ಖ್ಯಾತಿ ಪಡೆದ ನಟ ವಿರಾಟ್‌, ರಾಯಲ್‌ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ವಿರಾಟ್‌ಗೆ ಸಂಜನಾ ಆನಂದ್‌ ಜೋಡಿಯಾಗಿದ್ದಾರೆ. ಇನ್ನುಳಿದಂತೆ, ಅಚ್ಯುತ್‍ ಕುಮಾರ್, ಛಾಯಾ ಸಿಂಗ್‍, ರವಿ ಭಟ್‍ ಪ್ರಮುಖ ಪಾತ್ರಗಳಲ್ಲಿ ನಟಿಸಿದರೆ, ಖಳನಾಯಕನಾಗಿ ರಘು ಮುಖರ್ಜಿ ತಮ್ಮ ಖದರ್‌ ತೋರಿಸಿದ್ದಾರೆ. ಹಾಡುಗಳು ಮತ್ತು ಮೇಕಿಂಗ್‌ನಿಂ...