Bengaluru, ಫೆಬ್ರವರಿ 27 -- Kannada OTT Movies: ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಪ್ಲಿಕ್ಸ್‌, ಜೀ5, ಜಿಯೋಸ್ಟಾರ್‌ ಸೇರಿದಂತೆ ಹಲವು ಒಟಿಟಿಗಳಲ್ಲಿ ಅಪರೂಪಕ್ಕೆ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ, ಕನ್ನಡ ಸಿನಿಮಾಕ್ಕಾಗಿ ಇರುವ ನಮ್ಮ ಫ್ಲಿಕ್ಸ್‌ (nammaflix) ಒಟಿಟಿಯಲ್ಲಿಯೂ ಸಾಕಷ್ಟು ಸಿನಿಮಾಗಳಿವೆ. ಸದ್ಯ ಹೊಸ ಅಥವಾ ಇತ್ತೀಚಿನ ತಿಂಗಳುಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳನ್ನು ನೋಡಲು ಬಯಸುವವರಿಗೆ ಕೆಲವು ಕನ್ನಡ ಸಿನಿಮಾಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಖ್ಯಾತ ಉದ್ಯಮಿ, ಪದ್ಮಶ್ರೀ ಪುರಸ್ಕೃತ VRL ಸಂಸ್ಥೆಯ ಎಂಡಿ ವಿಜಯ್‌ ಸಂಕೇಶ್ವರ್‌ ಅವರ ಜೀವನ ಆಧರಿತ ಸಿನಿಮಾ ವಿಜಯಾನಂದ್‌ ಕೆಲವು ದಿನಗಳ ಹಿಂದೆಯೇ ಒಟಿಟಿಗೆ ಆಗಮಿಸಿದೆ. VRL ಫಿಲ್ಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ. ಆನಂದ್ ಸಂಕೇಶ್ವರ್ ಈ ಸಿನಿಮಾವನ್ನು ನಿರ್ಮಿಸಿದ್ದರು.ನಿಹಾಲ್ ರಜಪೂತ್‌, ಭರತ್ ಬೋಪಣ್ಣ, ಅನಂತ್ ನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ವಿನಯ ಪ್ರಸಾದ್ ಮತ್ತು ಸಿರಿ ಪ್ರಹ್ಲಾದ್ ಪ್ರಮುಖ ಪಾತ...