ಭಾರತ, ಏಪ್ರಿಲ್ 8 -- Kannada OTT Movies: ವಾರಾಂತ್ಯ ಕಳೆದು ಮತ್ತೊಂದು ಹೊಸ ವಾರ ಶುರುವಾಯ್ತು ಎಂದರೆ, ಅಲ್ಲಿ ಮತ್ತಷ್ಟು ಹೊಸ ಸಿನಿಮಾಗಳ ಆಗಮನ ಖಚಿತ ಎಂದರ್ಥ. ಅದರಲ್ಲೂ ಒಟಿಟಿ ಅನ್ನೋ ಮಹಾಸಾಗರದಲ್ಲಿ ನಿತ್ಯ ಹತ್ತಾರು ಕಂಟೆಂಟ್‌ಗಳು ಸ್ಟ್ರೀಮಿಂಗ್‌ ಆರಂಭಿಸುತ್ತವೆ. ಬೇರೆ ಬೇರೆ ಭಾಷೆಗಳ ಬಗೆಬಗೆ ಪ್ರಕಾರದ ಸಿನಿಮಾಗಳು ನೋಡುಗರ ಗಮನ ಸೆಳೆಯುತ್ತವೆ. ಬೇರೆ ಭಾಷೆಯ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಕನ್ನಡದ ಸಿನಿಮಾಗಳ ಆಗಮನ ಕೊಂಚ ವಿರಳ. ಇದೀಗ ಕಳೆದ ತಿಂಗಳಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದ್ದ ʻರಾಕ್ಷಸʼ ಸಿನಿಮಾ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ. ಅಂದರೆ, ಈ ಚಿತ್ರದ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ಶಾನ್ವಿ ಎಂಟರ್ಟೈನ್‌ಮೆಂಟ್‌ ಮೂಲಕ ದೀಪು ಬಿ.ಎಸ್ ನಿರ್ಮಿಸಿರುವ, ನವೀನ್ ಮತ್ತು ಮಾನಸಾ ಕೆ‌ ಸಹ ನಿರ್ಮಾಣದಲ್ಲಿ ಮೂಡಿ ಬಂದಿರುವ ಸಿನಿಮಾ ರಾಕ್ಷಸ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶಿವರಾತ್ರಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳ...