ಭಾರತ, ಏಪ್ರಿಲ್ 4 -- ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್‌ ಶೆಟ್ಟಿ ನಿರ್ಮಾಣ ಮಾಡಿದ ಸಿನಿಮಾ ಶಿವಮ್ಮ. ಗ್ರಾಮೀಣ ಸೊಗಡಿನ ಈ ಚಿತ್ರ, ಹತ್ತಾರು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಬಾಚಿಕೊಂಡಿದೆ.

ಶಿವಮ್ಮ ಸಿನಿಮಾ ಮೂಲಕ ರಿಯಲಿಸ್ಟಿಕ್‌ ವಿಚಾರಗಳನ್ನು ಟಚ್‌ ಮಾಡಿದ್ದ ರಿಷಬ್‌ ಶೆಟ್ಟಿ, ನೇರವಾಗಿ ಚಿತ್ರಮಂದಿರಗಳಿಗೆ ಈ ಸಿನಿಮಾವನ್ನು ಕರೆತರದೆ, ಸಿನಿಮೋತ್ಸವಕ್ಕೂ ಕೊಂಡೊಯ್ದಿದ್ದರು.

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿ ವಿಶ್ವದ ಹದಿನೇಳಕ್ಕೂ ಅಧಿಕ ಚಿತ್ರೋತ್ಸವಗಳಲ್ಲಿ ಶಿವಮ್ಮ ಸಿನಿಮಾ ಪ್ರದರ್ಶನ ಕಂಡಿದೆ. ಹಲವು ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ.

ಇಂತಿಪ್ಪ ಸಿನಿಮಾ 2024ರ ಜೂನ್ 14ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಆಗಿತ್ತು. ಉತ್ತರ ಕರ್ನಾಟಕದ ಯರೇಹಂಚಿನಾಳ ಗ್ರಾಮದ ಜೈಶಂಕರ್ ಆರ್ಯರ್ ತಮ್ಮದೇ ಊರಿನ ಪ್ರತಿಭೆಗಳನ್ನು ಬಳಸಿಕೊಂಡಿ ಈ ಸಿನಿಮಾ ನಿರ್ದೇಶನ ಮಾಡಿದ್ದರು.

ಶಿವಮ್ಮ ಪಾತ್ರದಲ್ಲಿ ಶರಣಮ್ಮ ಚಟ್ಟಿ ಮುಖ್ಯಭೂಮಿಕೆಯಲ್ಲಿದ್ದರು. ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ ಹಾಗೂ ...