ಭಾರತ, ಏಪ್ರಿಲ್ 1 -- Muddusose Kannada Serial: ಕಲರ್ಸ್‌ ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್‌ ಮುಕ್ತಾಯದೊಂದಿಗೆ ಹೊಸ ಸೀರಿಯಲ್‌ ಆರಂಭವಾಗುತ್ತಿದೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ರನ್ನರ್‌ ಅಪ್‌ ಆಗಿದ್ದ ನಟ ತ್ರಿವಿಕ್ರಮ್‌ ನಟನೆಯ ಮುದ್ದುಸೊಸೆ ಸೀರಿಯಲ್‌ ಇದೇ ಏಪ್ರಿಲ್‌ 14ರಿಂದ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಕಲರ್ಸ್‌ ಕನ್ನಡ ವಾಹಿನಿಯು ತನ್ನ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಮುದ್ದುಸೊಸೆಯ ಪ್ರೊಮೊ ಬಿಡುಗಡೆ ಮಾಡಿದೆ. ಅಪ್ರಾಪ್ತೆ ಯುವತಿಯೊಬ್ಬಳನ್ನು ಮದುವೆಯಾಗುವ ನಾಯಕ ಮತ್ತು ಇತರೆ ಅನೇಕ ಕೌಟುಂಬಿಕ, ಸಾಮಾಜಿಕ ಅಂಶಗಳನ್ನು ಈ ಸೀರಿಯಲ್‌ ಹೊಂದಿದೆ ಎಂದು ಪ್ರೊಮೊದ ಮೂಲಕ ಬಹಿರಂಗಪಡಿಸಲಾಗಿದೆ.

ಮುದ್ದುಸೊಸೆ ಎಂಬ ಸೀರಿಯಲ್‌ ಕಲರ್ಸ್‌ ಕನ್ನಡದಲ್ಲಿ ಆರಂಭವಾಗಲಿದೆ ಎಂಬ ಮಾಹಿತಿಯನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಈ ಹಿಂದೆಯೇ ಪ್ರಕಟಿಸಿತ್ತು. ಆದರೆ, ಈ ಸೀರಿಯಲ್‌ ಪ್ರಸಾರ ಆರಂಭವಾಗುವ ದಿನಾಂಕ ಯಾವಾಗ ಎಂಬ ಮಾಹಿತಿ ಆಗ ಲಭ್ಯವಿರಲಿಲ್ಲ. ಈಗ ಕಲರ್ಸ್‌ ಕನ್ನಡವು ಈ ಕುರಿತು ಅಧಿಕೃತವಾ...