ಭಾರತ, ಫೆಬ್ರವರಿ 27 -- Shabaash Baddi Magane: ಪ್ರಮೋದ್‌ ಶೆಟ್ಟಿ ನಾಯಕ ನಟನಾಗಿ ನಟಿಸಿರುವ ಶಭಾಷ್ ಬಡ್ಡಿಮಗ್ನೆ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಆದ್ಯಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್‌ ಶೆಟ್ಟಿ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಲಾಫಿಂಗ್‌ ಬುದ್ಧ ಸಿನಿಮಾದಲ್ಲಿ ಪ್ರಮೋದ್‌ ಶೆಟ್ಟಿ ಡೊಳ್ಳುಹೊಟ್ಟೆಯ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದರು. ಶಭಾಷ್ ಬಡ್ಡಿಮಗ್ನೆ ಸಿನಿಮಾದಲ್ಲಿಯೂ ಪ್ರಮೋದ್‌ ಶೆಟ್ಟಿ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದಾರೆ.

ಕಾಂತಾರ ಸಿನಿಮಾದ ಬಳಿಕ ಪ್ರಮೋದ್‌ ಶೆಟ್ಟಿ ನಾಯಕ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಎಸ್ ರಾಜಶೇಖರ್ ನಿರ್ದೇಶನದ 'ಶಭಾಷ್ ಬಡ್ಡಿಮಗ್ನೆ' ಸಿನಿಮಾದಲ್ಲಿ ಇವರು ಅಸಮರ್ಥ ಪೊಲೀಸ್‌ ಅಧಿಕಾರಿಯಂತೆ ಕಾಣಿಸಲಿದ್ದಾರೆ. ಆದರೆ, ಸಿನಿಮಾದ ಕಥೆಯೊಳಗಿನ ಪ್ರಮುಖ ಪ್ರಕರಣವನ್ನು ಬಗೆಹರಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಾರೆ ಎನ್ನಲಾಗಿದೆ. ಜತೆಗೆ, ಈ ಸಿನಿಮಾದಲ್ಲಿ ಇವರದ್ದು ರೋಮ್ಯಾಂಟ...