ಭಾರತ, ಏಪ್ರಿಲ್ 4 -- April Kannada Movies: ಕಳೆದ ಮೂರು ತಿಂಗಳಲ್ಲಿ ಕನ್ನಡ ಚಿತ್ರರಂಗದಲ್ಲಿ 60ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಈ ಚಿತ್ರಗಳ ಪೈಕಿ ಯಾವೊಂದು ಚಿತ್ರವೂ ದೊಡ್ಡ ಯಶಸ್ಸು ಕಂಡಿಲ್ಲ. ಶೇ. 95ರಷ್ಟು ಚಿತ್ರಗಳು ಹಾಕಿದ ದುಡ್ಡನ್ನೂ ವಾಪಸ್ಸು ಪಡೆದಿಲ್ಲ. ಹೀಗಿರುವಾಗಲೇ, ಏಪ್ರಿಲ್‍ ತಿಂಗಳಲ್ಲಿ ಒಂದಿಷ್ಟು ನಿರೀಕ್ಷೆಯ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ.

ಡಾ. ರಾಜಕುಮಾರ ಅವರ ಐವರು ಮೊಮ್ಮಕ್ಕಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಆ ಸಾಲಿಗೆ ಷಣ್ಮುಖ ಗೋವಿಂದರಾಜ್‍ ಸಹ ಸೇರಿದ್ದಾರೆ. ಡಾ. ರಾಜ್‍ ಪುತ್ರಿ ಲಕ್ಷ್ಮೀ ಮತ್ತು ಗೋವಿಂದರಾಜ್‍ ಅವರ ಮಗನಾದ ಷಣ್ಮುಖ, 'ನಿಂಬಿಯಾ ಬನಾದ ಮ್ಯಾಗ' ಎಂಬ ಚಿತ್ರದ ಮೂಲಕ ಹೀರೋ ಆಗುತ್ತಿದ್ದು, ಈ ಚಿತ್ರವು ಏ. 04ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ 'ಮೇಘಮಾಲೆ' ಖ್ಯಾತಿಯ ಸುನಾದ್‍ ರಾಜ್‍ ಸುಮಾರು 25 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗುತ್ತಿದ್ದಾರೆ. ತಾಯಿ-ಮಗನ ಸೆಂಟಿಮೆಂಟ್‍ ಕುರಿತಾದ ಚಿತ್ರವನ್ನು ಈ ಹಿಂದೆ 'ಸೀ...