ಭಾರತ, ಏಪ್ರಿಲ್ 9 -- Nanna Preethiya Hudugi Movie: ನನ್ನ ಪ್ರೀತಿಯ ಹುಡುಗಿ ಸಿನಿಮಾ ನೆನಪಿದೆಯೇ? ಈ ಕಾಲದ ಬಹುತೇಕರಿಗೆ ಈ ಹೆಸರು ನೆನಪಾಗುವುದು ಕಷ್ಟ. ಆದರೆ, ಹಳೆಯ ಸಿನಿಮಾಗಳ ಗುಂಗಿನಲ್ಲಿ ಇರುವವರಿಗೆ ನನ್ನ ಪ್ರೀತಿಯ ಹುಡುಗಿ ಸಿನಿಮಾ ನೆನಪಿರಬಹುದು. ಆದರೆ, ಕಾರ್‌ ಕಾರ್‌ ಎಲ್‌ ನೋಡಿ ಕಾರ್‌ ಎಂಬ ಹಾಡು ನೆನಪಿದೆಯೇ? ಎಂದು ಕೇಳಿದರೆ ಖಂಡಿತಾವಾಗಿಯೂ ಈ ಜಮಾನದವರಿಗೂ ನೆನಪಿದೆ ಎನ್ನಬಹುದು. ಏಕೆಂದರೆ, ಕಾರ್ ಕಾರ್ ಎಲ್ನೋಡಿ ಕಾರ್ ಎಂಬ ಹಾಡು ಈಗಲೂ ಮೋಡಿ ಮಾಡುವಂತೆ ಇದೆ. ಬಿ ಜಯಶ್ರೀ ಕಂಚಿನ ಕಂಠದಲ್ಲಿ ಈ ಹಾಡು ಅದ್ಭುತವಾಗಿ ಮೂಡಿ ಬಂದಿತ್ತು. ಆ ಕಾಲದಲ್ಲಿ ಇ-ಕಾಲ ತೋರಿಸಿದ ಹಾಡು ಇದು ಎಂದರೆ ತಪ್ಪಾಗದು. ಅಂದಹಾಗೆ, ನನ್ನ ಪ್ರೀತಿಯ ಹುಡುಗಿ ಸಿನಿಮಾ ಬಂದು ಇಂದಿಗೆ (ಏಪ್ರಿಲ್‌ 6) ಬರೋಬ್ಬರಿ 24 ವರ್ಷಗಳು ಕಳೆದಿವೆ. ಇಷ್ಟು ವರ್ಷವಾಯ್ತೇ ಎಂದು ಕೆಲವರಿಗೆ ಅಚ್ಚರಿಯಾಗಬಹುದು. ಕೆಲವರಿಗೆ ಇದು ನಿನ್ನೆ ಮೊನ್ನೆ ನೋಡಿದ ಸಿನಿಮಾದಂತೆ ನೆನಪಾಗಬಹುದು.

ಫೇಸ್‌ಬುಕ್‌ನಲ್ಲಿ ಸಿನಿಮಾ ನಿರ್ದೇಶಕ "ನನ್ನ ಪ್ರೀತಿಯ ಹುಡುಗಿ" ಸಿ...