ಭಾರತ, ಏಪ್ರಿಲ್ 12 -- Kannada Full Movies: ಇಂದು (ಏಪ್ರಿಲ್‌ 12) ರಾಜ್‌ಕುಮಾರ್‌ ಪುಣ್ಯಸ್ಮರಣೆ. ಡಾ. ರಾಜ್‌ಕುಮಾರ್‌ ಜನಪ್ರಿಯ ಗೀತೆಗಳನ್ನು ಕೇಳುತ್ತಾ, ರಾಜ್‌ ಕುಮಾರ್‌ ಸಿನಿಮಾಗಳನ್ನು ನೋಡುತ್ತ ಅಭಿಮಾನಿಗಳು ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತಿರಬಹುದು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಓದುಗರಿಗಾಗಿ ರಾಜ್‌ಕುಮಾರ್‌ ಅವರ ಆಯ್ದ ಐದು ಸಿನಿಮಾಗಳನ್ನು ಇಲ್ಲಿ ನೀಡುತ್ತಿದೆ. ಇದೇ ಪುಟದಲ್ಲಿದ್ದುಕೊಂಡು ಆಕಸ್ಮಿಕ, ಸಂಪತ್ತಿಗೆ ಸವಾಲ್‌, ದೇವತಾ ಮನುಷ್ಯ, ಭಕ್ತ ಪ್ರಹ್ಲಾದ, ಹೊಸ ಬೆಳಕು ಸಿನಿಮಾಗಳನ್ನು ಉಚಿತವಾಗಿ ನೋಡಬಹುದು. ಈ ಐದು ಸಿನಿಮಾಗಳ ಕುರಿತು ಒಂದಿಷ್ಟು ಸಂಕ್ಷಿಪ್ತ ಮಾಹಿತಿಯನ್ನೂ ಇಲ್ಲಿ ನೀಡಲಾಗಿದೆ.

ಇದು 1974ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಎ.ವಿ.ಶೇಷಗಿರಿ ರಾವ್ ನಿರ್ದೇಶನದ ಈ ಚಿತ್ರ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿತ್ತು. ನಾಟಕವೊಂದು ಸಿನಿಮಾವಾಗಿ ಖ್ಯಾತಿ ಪಡೆಯಿತು. ಈ ಚಿತ್ರಗಳ ಸಂಭಾಷಣೆಗಳು ಹಾಡುಗಳಿಗಿಂತ ಹೆಚ್ಚು ಖ್ಯಾತಿ ಪಡೆದಿತ್ತು. ಡಾ.ರಾಜ್‍ರಂತಹ ಮೇರು ನಟನನ್ನು ಬೈಯ್ಯುವಂತಹ ಗಯ್ಯಾಳ...