Kanakagiri, ಮಾರ್ಚ್ 2 -- Kanakagiri utsav 2025: ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ 20 ಮತ್ತು 21 ರಂದು ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕನಕಗಿರಿ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಐತಿಹಾಸಿಕ ಪುಣ್ಯ ಕ್ಷೇತ್ರವಾದ ಕನಕಗಿರಿಯ ಜಾತ್ರಾ ಮಹೋತ್ಸವ ಸಂದರ್ಭದಲ್ಲಿಯೇ ಕನಕಗಿರಿ ಉತ್ಸವವನ್ನು ಆಚರಿಸಬೇಕೆಂಬುವುದು ಜನರ ಒತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಾ.20 ಮತ್ತು 21 ರಂದು ಕನಕಗಿರಿ ಉತ್ಸವ ಆಚರಿಸಲಾಗುವುದು. ವಿವಿಧ ಕಲಾವಿದರು ಕನಕಗಿರಿ ಉತ್ಸವದಲ್ಲಿ ಕಾರ್ಯಕ್ರಮ ನೀಡಲಿದಾರೆ. ಚಲನಚಿತ್ರ ಕಲಾವಿದರು ಸೇರಿದಂತೆ ಸಾಂಸ್ಕೃತಿಕ ವಲಯದರನ್ನು ಕನಕಗಿರಿ ಉತ್ಸವಕ್ಕೆ ಆಹ್ವಾನಿಸಲಾಗುತ್ತಿದೆ. ಶೇಷವಾಗಿ ಹೊನಲು ಬೆಳಕಿನ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿಯನ್ನು ಜನರ ಹೆಚ್ಚು ಆಕರ್ಷಣೆಯನ್ನು ಸೆಳೆಯುವ ರೀತಿಯಲ್ಲಿ ಹಮ್ಮಿಕೊಳ್ಳಿ. ಈ ಪಂದ್ಯಗಳು ಎರಡು ದಿನಗಳ ಕಾಲ ನಡೆಯಬೇಕು. ಕನಿಷ್ಠ 20 ರಿಂದ 30 ತಂಡಗಳು ಪಂದ್ಯಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.

ಅದ್ದೂರಿ ಹಾಗೂ ವ್ಯವಸ್ಥಿತ ಕ...