Kalaburgi, ಫೆಬ್ರವರಿ 24 -- ಕಲಬುರಗಿ: ಮಹಿಳೆಯೊಬ್ಬರಿಗೆ ಹೆರಿಗೆ ಮುಗಿಸಿದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆವರಣದ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಹೊಟ್ಟೆಯಲ್ಲಿಯೇ ಹತ್ತಿ ಬಟ್ಟೆ ಉಳಿಸಿದ್ದರಿಂದ ತೀವ್ರ ತೊಂದರೆಗೆ ಒಳಗಾಗಿರುವ ಘಟನೆ ನಡೆದಿದೆ. ಹೆರಿಗೆಗೆಂದು ದಾಖಲಾಗಿದ್ದ ಮಹಿಳೆ ಮಗುವಿನೊಂದಿಗೆ ಮನೆಗೆ ಹೋದ ಒಂದೆರಡು ದಿನದಲ್ಲೇ ತೀವ್ರವ ಹೊಟ್ಟೆನೋವು ಕಾಣಿಸಿಕೊಂಡಿತು. ಮತ್ತೆ ಆಸ್ಪತ್ರೆಗೆ ಹೋಗಿ ಎಕ್ಸ್‌ರೇ ತೆಗೆಸಿದರೆ ಹೊಟ್ಟೆಯಲ್ಲಿ ಇದ್ದುದು ಹತ್ತಿ ಬಟ್ಟೆ. ಇದೇ ಕಾರಣಕ್ಕೆ ಮೂರು ದಿನದ ಬಾಣಂತಿ ಇನ್ನಿಲ್ಲದ ನೋವು ಅನುಭವಿಸಿದರು. ಕೊನೆಗೆ ಸಮೀಪದ ಆಸ್ಪತ್ರೆಗೆ ಹೋಗಿ ಮತ್ತೊಮ್ಮೆ ಕಿರು ಶಸ್ತ್ರಚಿಕಿತ್ಸೆಯೊಂದಿಗೆ ಹೊಟ್ಟೆಯಲ್ಲಿ ಬಟ್ಟಿದ್ದ ಹತ್ತಿಯನ್ನು ತೆಗೆಸಿಕೊಂಡು ನಿರಾಳರಾದರು. ಆದರೆ ಹೊಟ್ಟೆಯಲ್ಲಿ ಹತ್ತಿ ಬಿಟ್ಟು ನಿರ್ಲಕ್ಷ್ಯ ತೋರಿದ್ದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ವೈದ್ಯರು ಮಾತ್ರ ತಮ್ಮದೇನೂ ತಪ್ಪಿಲ್ಲ ಎಂದು ವಾದಿಸುತ...