ಭಾರತ, ಮಾರ್ಚ್ 9 -- Kalaburagi Crime: ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕು ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪ್ರೇಮಪ್ರಕರಣ ದುರಂತ ಅಂತ್ಯ ಕಂಡಿದೆ. ಬಾಲಕಿಗೆ ಮದುವೆ ನಿಶ್ಚಯವಾದ ಬೆನ್ನಿಗೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ಯಡ್ರಾಮಿ ತಾಲೂಕು ಐನಾಪುರ ಗ್ರಾಮದ ಸಮೀಪ ನಡೆದಿದೆ. ಮೃತರನ್ನು ಮಳ್ಳಿ ಗ್ರಾಮದ ಕೆಂಚಪ್ಪ (16) ಮತ್ತು ನಾಗರಹಳ್ಳಿ ಗ್ರಾಮದ ನಸೀಮಾ (15) ಎಂದು ಗುರುತಿಸಲಾಗಿದೆ.

ಕೆಂಚಪ್ಪ ಹಾಗೂ ನಸೀಮಾ ಯಡ್ರಾಮಿ ತಾಲೂಕು ಮಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು. ಕಳೆದ ಒಂದು ವರ್ಷದಿಂದ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನಸೀಮಾಗೆ ಅವರ ಮನೆಯಲ್ಲಿ ಬೇರೆ ವರನನ್ನು ನೋಡಿ ಮದುವೆ ನಿಶ್ಚಯ ಮಾಡಿದ್ದರು. ಇದರಿಂದ ಕೆಂಚಪ್ಪ ಹಾಗೂ ನಸೀಮಾ ಕಳವಳಕ್ಕೆ ಈಡಾಗಿದ್ದರು. ಇಬ್ಬರೂ ಪರಸ್ಪರ ಈ ಬಗ್ಗೆ ಮಾತನಾಡಿಕೊಂಡಿದ್ದು, ಬಳಿಕ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳುವ ಅತಿರೇಕ ಮಾಡಿಕೊಂಡರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಸೀಮಾ ತನ್ನ...