ಭಾರತ, ಮಾರ್ಚ್ 26 -- ನಟಿ ಕಾಜಲ್‌ ಅಗರ್‌ವಾಲ್‌ ಯಾವುದೇ ಉಡುಪಿನಲ್ಲಿಯೂ ಮುದ್ದಾಗಿ ಕಾಣಿಸುತ್ತಾರೆ. ಅವರ ಸೊಗಸಾದ ನೋಟ, ಮೈಮಾಟ, ಉಡುಗೆ ತೊಡುಗೆ, ಫ್ಯಾಷನ್‌ ಅಭಿರುಚಿ ಕುರಿತು ಎರಡು ಮಾತಿಲ್ಲ. ಈ ಸ್ಟಾರ್‌ ನಟಿ ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಮತ್ತೆ ತನ್ನ ಸೌಂದರ್ಯದ ಮೂಲಕ ಸುದ್ದಿಯಲ್ಲಿದ್ದಾರೆ.

ಕಾಜಲ್ ಅಗರ್ವಾಲ್ ಸುಕ್ಕುಗಟ್ಟಿದ ಬಣ್ಣದ ಮಿನುಗುಗಳನ್ನು ಹೊಂದಿರುವ ಟಾಪ್ ಧರಿಸಿ ಶೋ ನೀಡಿದ್ದಾರೆ. ಈ ಹೊಳೆಯು ಉಡುಪಿನಲ್ಲಿ ಅವರು ಇನ್ನಷ್ಟು ಮುದ್ದಾಗಿ ಕಾಣಿಸಿದ್ದಾರೆ.

ಕಾಜಲ್‌ ತನ್ನ ಮೇಲಿನ ಉಡುಗೆಗೆ ಹೊಂದಿಕೆಯಾಗುವಂತೆ ಕಪ್ಪು ಬಣ್ಣದ ಬಾಟಮ್‌ ಡ್ರೆಸ್‌ ಧರಿಸಿದ್ದಾರೆ. ಈ ಉಡುಗೆಯಲ್ಲಿ ನಟಿ ಮುದ್ದಾಗಿ ಕಾಣಿಸಿದ್ದು, ಅಭಿಮಾನಿಗಳ ಮನಸೂರೆಗೊಳಿಸಿದೆ.

ಕಾಜಲ್ ಈ ಫೋಟೋಗಳನ್ನು ಇಂದು (ಮಾರ್ಚ್ 26) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಗ್ಲಾಮರಸ್ ಲುಕ್ ಹೊಂದಿರುವ ಈ ಫೋಟೋಗಳಿಗೆ ನೆಟ್ಟಿಗರು ಬಹಳಷ್ಟು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ.

ಕಾಜಲ್ ಅಗರ್‌ವಾಲ್‌ ಅ...